ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ: ಸರ್ಕಾರದ ಆದೇಶ ಕುರಿತು ಹೈಕೋರ್ಟ್ ಅಸಮಾಧಾನ…

Promotion

green-fireworks-sale-high-court-dissatisfaction-government-orderಬೆಂಗಳೂರು,ನವೆಂಬರ್,12,2020(www.justkannada.in):  ಕೊರೋನಾ ಹಿನ್ನೆಲೆ ದೀಪಾವಳಿಹಬ್ಬದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿರ್ಬಂಧವೇರಿರುವ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ. ಆದರೆ ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.kannada-journalist-media-fourth-estate-under-loss

ಎಲ್ಲಾ ರೀತಿಯ ಪಟಾಕಿ ನಿರ್ಬಂಧಕ್ಕೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಸಿಜೆ ಎಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರದ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿರುವ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.green-fireworks-sale-high-court-dissatisfaction-government-order

ಸರ್ಕಾರದ ಆದೇಶದಲ್ಲಿ ಸ್ಪಷ್ಟತೆಯೇ ಇಲ್ಲ. ಆದೇಶವೇ ಅರ್ಥಹೀನಾವಾಗಿದೆ. ಹಸಿರು ಪಟಾಕಿ ಏನು ಎಂಬುದನ್ನ ಸ್ಪಷ್ಟಪಡಿಸಿಲ್ಲ. ಹೀಗಾಗಿ ನಾಳೆಯೊಳಗೆ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೆಯೇ ಪಟಾಕಿಯಿಂದಾಗಿ ವಾಯುಮಾಲಿನ್ಯ ಉಂಟಾಗಬಹುದು ಕೊರೊನಾ ಹರಡಲು ಕಾರಣವಾಗಬಹುದು.  ಸಮರ್ಪಕ ಕ್ರಮ ಆಗದಿದ್ರೆ ಪಟಾಕಿ ನಿರ್ಬಂಧಿಸಲಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ. ಹಾಗೆಯೇ ಮಾಲಿನ್ಯ ತಡೆಗೆ ಕೈಗೊಂಡ ಕ್ರಮಗಳೇನು ಎಂಬ ಬಗ್ಗೆ ಉತ್ತರಿಸಲು ಸೂಚನೆ ನೀಡಿದೆ.

Key words: Green –Fireworks- Sale -High Court -dissatisfaction – government order.