ನಮ್ಮ ಪಕ್ಷದಲ್ಲಿ ಉತ್ತಮ ಅವಕಾಶ: ಅಸಮಾಧಾನಿತರು ಬಿಜೆಪಿ ಸೇರಲಿದ್ದಾರೆ- ಸಚಿವ ಅಶ್ವಥ್ ನಾರಾಯಣ್.

Promotion

ಹುಬ್ಬಳ್ಳಿ,ಜೂನ್,8,2022(www.justkannada.in):  ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ಉತ್ತಮ ಅವಕಾಶಗಳಿವೆ. ಹೀಗಾಗಿ ಇನ್ನೂ ಕೆಲವರು ಬಿಜೆಪಿ ಸೇರಲಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಅವಕಾಶಗಳಿವೆ. ಕುಟುಂಬ  ರಾಜಕಾರಣದಿಂದ ಹಲವರು ಬೇಸತಿದ್ದಾರೆ.  ಅಸಮಾಧಾನಿತರು ಬಿಜೆಪಿಗೆ ಬರುತ್ತಾರೆ. ಯಾರ್ಯಾರು ಬರುತ್ತಾರೆ ಅಂತಾ ಶೀಘ್ರವೇ ತಿಳಿಯಲಿದೆ. ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಭವಿಷ್ಯ ಇದೆ. ಹೀಗಾಗಿ ಇನ್ನೂ ಅನೇಕರು ಬಿಜೆಪಿ ಸೇರಲಿದ್ದಾರೆ  ಎಂದು ಹೇಳಿದರು.

Key words: Great-opportunity–bjp-Minister-Ashwath Narayan.