ಬಜೆಟ್ ನಲ್ಲಿ ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ..? ಇಲ್ಲಿದೆ ಮಾಹಿತಿ.

Promotion

ಬೆಂಗಳೂರು,ಫೆಬ್ರವರಿ,17,2023(www.justkannada.in):  ಇಂದು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದು ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ಬಜೆಟ್ ಮಂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ಕ್ಷೇತ್ರಕ್ಕೆ 37, 960 ಕೋಟಿ ರೂಪಾಯಿ, ಜಲಸಂಪನ್ಮೂಲ ಇಲಾಖೆಗೆ ಈ  ಬಾರಿ  22,854 ರೂ.ಗಳು ಗ್ರಾಮೀಣಾಭಿವೃದ್ಧಿ,ಪಂಚಾಯತ್‌ ರಾಜ್‌ಗೆ 20, 494 ರೂ ನಗರಾಭಿವೃದ್ಧಿಇಲಾಖೆಗೆ ಈ ಬಾರಿ 17,938 ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದರು.

ಬಜೆಟ್ ನಲ್ಲಿ ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಇಲ್ಲಿದೆ ಮಾಹಿತಿ.

 • ಶಿಕ್ಷಣ ಇಲಾಖೆ – 37,960 ಕೋಟಿ ರೂ
 • ಜಲಸಂಪನ್ಮೂಲ ಇಲಾಖೆ – 22,854 ಕೋಟಿ ರೂ.
 • ಇಂಧನ ಇಲಾಖೆ – 13,803 ಕೋಟಿ ರೂ.
 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ 15,151 ಕೋಟಿ ರೂ.
 • ವಸತಿ ಇಲಾಖೆ-3787.01 ಕೋಟಿ ರೂ.
 • ಆಹಾರ ಮತ್ತು ನಾಗರಿಕ ಸರಬರಾಜು – 4,608 ಕೋಟಿ ರೂ.
 • ಮಹಿಳಾ ಮತ್ತು ಮಕ್ಕಳ ಕಲ್ಯಾಣ- 5,676 ಕೋಟಿ ರೂ. * ಕೃಷಿ ಮತ್ತು ತೋಟಗಾರಿಕ-9,456 ಕೋಟಿ ರೂ.
 • ಲೋಕೋಪಯೋಗಿ ಇಲಾಖೆ – 10,741 ಕೋಟಿ ರೂ. * ಸಮಾಜಕಲ್ಯಾಣ ಇಲಾಖೆ – 11,163 ಕೋಟಿ ರೂ.
 • ಒಳಾಡಳಿತ ಮತ್ತು ಸಾರಿಗೆ – 14,509 ಕೋಟಿ ರೂ.
 • ಕಂದಾಯ ಇಲಾಖೆ – 15,943 ಕೋಟಿ ರೂ.
 • ನಗರಾಭಿವೃದ್ಧಿ ಇಲಾಖೆ – 17938 ಕೋಟಿ ರೂ.
 • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 20,494 ಕೋಟಿ

ಇತರೆ – 1,16,968 ಕೋಟಿ ರೂ.

ಈ ಬಾರಿಯ ಬಜೆಟ್ ಗಾತ್ರ  3 ಲಕ್ಷ 9 ಸಾವಿರ 182 ಕೋಟಿ ರೂ ಆಗಿದೆ.

Key words: grant – department – budget- CM Bommai