ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನ ಅದ್ಧೂರಿ ಉದ್ಘಾಟನೆ:  ಡಾ. ರಾಜ್ ಕುಟುಂಬಕ್ಕೆ ಪುಷ್ಪನಮನ.

 

ಬೆಂಗಳೂರು, ಆಗಸ್ಟ್ 6, 2022 (www.justkannada.in): ಎರಡು ವರ್ಷಗಳ ಅಂತರದ ನಂತರ, ಲಾಲ್‌ ಬಾಗ್‌ ನಲ್ಲಿ ನಡೆಯುವ ೨೧೨ನೇ ಆವೃತ್ತಿಯ ವಾರ್ಷಿಕ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ, ಆಗಸ್ಟ್ 5ರಂದು ಅದ್ಧೂರಿಯಾಗಿ ಉದ್ಘಾಟಿಸಲಾಯಿತು.

ಮುಂದಿನ 10 ದಿನಗಳವರೆಗೂ ನಡೆಯಲಿರುವ ಈ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು 15 ಲಕ್ಷ ಜನರು ಆಗಮಿಸಲಿದ್ದಾರೆ ಎಂದು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಅಂದಾಜಿಸಿದ್ದಾರೆ.

ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ಕನ್ನಡ ಚಲನಚಿತ್ರರಂಗದ ವರನಟ ಡಾ. ರಾಜ್‌ ಕುಮಾರ್ ಮತ್ತು ಪುನೀತ್ ರಾಜ್‌ ಕುಮಾರ್ ಅವರ ಸ್ಮರಣಾರ್ಥವಾಗಿ ನಡೆಸಲಾಗುತ್ತಿದೆ. ದಿವಂಗತ ಕಲಾವಿದರ ಸುಂದರ ಮೂರ್ತಿಗಳನ್ನು ಲಾಲ್‌ ಬಾಗ್‌ ನ ಗಾಜಿನಮನೆಯಲ್ಲಿ ಅಲಂಕರಿಸಿ ಪರದರ್ಶಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಮೊದಲನೇ ದಿನದಂದು ೪,೨೨೬ ಜನರು ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ರೂ.೨.೯೪ ಲಕ್ಷ ಆದಾಯಗಳಿಕೆಯಾಗಿರುವುದಾಗಿ ತಿಳಿದು ಬಂದಿದೆ.

ಪ್ರವೇಶ ಟಿಕೆಟ್

ಈ ಬಾರಿ ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಅಧಿಕಾರಿಗಳು ಈ ಹಿಂದೆ ಇದ್ದಂತೆಯೇ ಕೆಲಸದ ದಿನಗಳಲ್ಲಿ ವಯಸ್ಕರಿಗೆ ರೂ.೭೦ ಹಾಗೂ ಮಕ್ಕಳಿಗೆ ರೂ.೨೦ ಶುಲ್ಕ ನಿಗಧಿಪಡಿಸಲಾರುವುದಾಗಿ ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಪ್ರವೇಶ ಶುಲ್ಕ ಈ ಹಿಂದೆ ರೂ.೮೦ಕ್ಕೆ ನಿಗಧಿಪಡಿಸಲಾಗಿತ್ತು. ಆದರೆ ಈ ಬಾರಿ ರೂ.೭೫ಕ್ಕೆ ಇಳಿಸಲಾಗಿದೆ. ಸಮವಸ್ತ್ರದಲ್ಲಿ ಬರುವಂತಹ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ ಕೆಲವರು ವಯಸ್ಕರಿಗೆ ರೂ.೭೦ ಮತ್ತು ಮಕ್ಕಳಿಗೆ ರೂ.೨೦ ಪ್ರವೇಶ ಶುಲ್ಕ ದುಬಾರಿ ಎಂದನಿಸಿತು. “ಕೂಡು ಕುಟುಂಬಗಳ ಜನರಿಗೆ ಈ ಪ್ರವೇಶ ಶುಲ್ಕ ತುಂಬಾ ದುಬಾರಿಯಾಗುತ್ತದೆ,” ಎನ್ನುದು ಫೋಟೋಗ್ರಾಫರ್ ಲೋಕೇಶ್ ರಾಘವನ್ ಅವರ ಅಭಿಪ್ರಾಯವಾಗಿದೆ.

ಈ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ‘ಶೂನ್ಯ ತ್ಯಾಜ್ಯ, ಶೂನ್ಯ ಪ್ಲಾಸ್ಟಿಕ್’ ಅರಿವು ಮೂಡಿಸುವ ಅಭಿಯಾನವನ್ನು ಕೈಗೊಳ್ಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಘನ ತ್ಯಾಜ್ಯ ನಿರ್ವಹಣಾ ದುಂಡು ಮೇಜು ಹಾಗೂ ಬ್ಯೂಟಿಫುಲ್ ಇಂಡಿಯಾ ಮತ್ತು ಸಾಹಸ್ ಎನ್ನುವ ಸರ್ಕಾರೇತರ ಸಂಸ್ಥೆಗಳ ಸಂಯೋಜನೆಯೊಂದಿಗೆ ಪ್ಲಾಸ್ಟಿಕ್ ಮುಕ್ತ ಹಾಗೂ ತ್ಯಾಜ್ಯ ಮುಕ್ತ ಅಭಿಯಾನವನ್ನು ಕೈಗೊಂಡಿದೆ. ಸುಮಾರು ೧೫೦ ಸ್ವಯಂಸೇವಕರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ಜನರಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಎದುರಾಗುವ ಅಡ್ಡ ಪರಿಣಾಮಗಳ ಕುರಿತು ಅರಿವು ಮೂಡಿಸಲಿದ್ದಾರೆ.

60 ವಿವಿಧ ರೀತಿಯ ಪುಷ್ಪಗಳು

ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ರೋಜಾ ಹೂವುಗಳು, ಲಿಲ್ಲಿ ಹಾಗೂ ಹೈಡಾನ್‌ ಜಿಯಾ ಒಳಗೊಂಡಂತೆ ೬೦ ವಿವಿಧ ರೀತಿಯ ಪುಷ್ಪಗಳನ್ನು ಪ್ರದರ್ಶಿಸಲಾಗಿದೆ. ಸುಮಾರು ೩೭ ರೀತಿಯ ಪುಷ್ಪಗಳನ್ನು ೧೦ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಸಂಬಂಧ ಮಾತನಾಡಿದ ಲಾಲ್‌ ಬಾಗ್ ಸಸ್ಯತೋಟ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಎಂ. ಜಗದೀಶ್ ಅವರು ಇಲಾಖೆಯು ಟರ್ರಾರಿಯಮ್ಸ್ ಹಾಗೂ ಬೋನ್ಸಾಯ್‌ ನ ಪ್ರತ್ಯೇಕ ವಿಭಾಗಗಳನ್ನು ಗುರುತಿಸಿದೆ. “ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಅಲಂಕಾರಿಕ ತೋಟಗಾರಿಕೆಯ ಕುರಿತು ಆಸಕ್ತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಸಾಧ್ಯವಾದಷ್ಟೂ ಹೆಚ್ಚಿನ ವಿಧಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ,” ಎಂದು ವಿವರಿಸಿದರು.

ಫಲಪುಷ್ಪ ಪ್ರದರ್ಶನದ ಟಿಕೆಟ್‌ ಗಳನ್ನು ಆನ್‌ಲೈನ್‌ ನಲ್ಲಿ ಹಾಗೂ ಲಾಲ್‌ ಬಾಗ್‌ ನ ನಾಲ್ಕೂ ಪ್ರವೇಶದ್ವಾರಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರದರ್ಶನಕ್ಕೆ ಭೇಟಿ ನೀಡಲು ಆಗಮಿಸುವವರು ತಮ್ಮ ವಾಹನಗಳನ್ನು ಜೋಡಿ ರಸ್ತೆ ಹಾಗೂ ಜೆ.ಸಿ. ರಸ್ತೆಯಲ್ಲಿರುವ ಬಹು-ಮಹಡಿ ಪಾರ್ಕಿಂಗ್ ಕಟ್ಟಡಗಳಲ್ಲಿ ನಿಲ್ಲಿಸಬಹುದು. ದ್ವಿಚಕ್ರವಾಹನಗಳನ್ನು ಅಲ್-ಅಮೀನ್ ಕಾಲೇಜಿನ ಬಳಿ ನಿಲ್ಲಿಸಬಹುದು. “ಮೆಟ್ರೋ ರೈಲು ಸೇವೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವ ಸಲುವ ಪ್ರಯತ್ನವಾಗಿ ನಾವು ಮೂರು ನಿಷಮಿಗಳೊಂದರಂತೆ ರೈಲುಗಳ ಸೇವೆಯನ್ನು ಒದಗಿಸುವಂತೆ ಬಿಎಂಆರ್‌ ಸಿಎಲ್ ಅನ್ನು ಕೋರಿದ್ದೇವೆ,” ಎಂದರು.

ಲಾಲ್‌ ಬಾಗ್‌ ನ ಹೊರಭಾಗ ಹಾಗೂ ಒಳಭಾಗದಲ್ಲಿ ೬೦೦ ಪೋಲಿಸ್ ಹಾಗೂ ಭದ್ರತಾ ಸಿಬ್ಬಂದಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. “ಜೊತೆಗೆ ದಿನದ ೨೪ ಗಂಟೆಗಳೂ ಕಾರ್ಯನಿರ್ವಹಿಸುವ ೧೨೫ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ,” ಎಂದು ವಿವರಿಸಿದರು.

ಈ ನಡುವೆ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರು, ಟಿಕೆಟ್ ಕೊಳ್ಳಲು ಸಿದ್ದಾಪುರ ಪ್ರವೇಶದ್ವಾರದಲ್ಲಿನ ಉದ್ದನೆಯ ಸಾಲನ್ನು ನೋಡಿ ಬೇಸರ ವ್ಯಕ್ತಪಡಿಸಿದರು.

ಸರೋಜಾ ಕುಮಾರಿ ಎಂಬ ಹೆಸರಿನ ವೃದ್ಧೆಯೊಬ್ಬರು ಟಿಕೆಟ್ ಕೌಂಟರ್‌ ಗೇ ಸುಮಾರು ಸ್ಥಳ ಆಕ್ರಮಿಸಿಕೊಳ್ಳಲಾಗಿದೆ. “ನಮ್ಮಂತಹ ಹಿರಿಯ ನಾಗರಿಕರು ಪ್ರವೇಶದ್ವಾರವನ್ನು ಹುಡುಕುವಂತಾಗಿದೆ. ಹಾಗಾಗಿ ಒಂದು ಸಣ್ಣ ಕೌಂಟರ್ ತೆರೆದಿದ್ದರೆ ಸಾಕಾಗಿತ್ತು. ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಪಡೆಯುವುದು ಹಾಗೂ ನಿರ್ಗಮನದ ವ್ಯವಸ್ಥೆಯೇ ಒಂದು ಸವಾಲಾಗಿದೆ,” ಎಂದು ಅಭಿಪ್ರಾಯಪಟ್ಟರು.

ಸುದ್ದಿ ಮೂಲ: ಡೆಕ್ಕನೆ ಹೆರಾಲ್ಡ್

Key words: Grand opening -Lal Bagh – flower show