ಚುನಾವಣೆ ಪಕ್ಷಾತೀತವಾದರೂ, ನಮ್ಮ ಕಾರ್ಯಕರ್ತರಿಗೆ ಅಗತ್ಯ ಸಂದೇಶ ನೀಡುತ್ತೇವೆ-ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್

Promotion

ಬೆಂಗಳೂರು,ಡಿಸೆಂಬರ್,4,2020(www.justkannada.in): ‘ನಮಗೆ ಪಕ್ಷ, ಸಿದ್ಧಾಂತ ಇದೆ. ನಾವು ನಮ್ಮ ಕೆಲಸ ಮಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾವು ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಅಂತಾ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ಅರ್ಜಿಗೆ ನ್ಯಾಯಾಲಯ ಗೌರವಿಸಿ ಚುನಾವಣೆ ಆದೇಶಿಸಿದೆ. ಈ ಚುನಾವಣೆ ಪಕ್ಷಾತೀತವಾಗಿದ್ದರೂ ನಾವು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.logo-justkannada-mysore

ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ ಶಿವಕುಮಾರ್,  ‘ಸುರ್ಜೆವಾಲ ಅವರು ನಮ್ಮ ಪ್ರಧಾನ ಕಾರ್ಯದರ್ಶಿಗಳು. ಅವರು 6ರಂದು ಬೆಂಗಳೂರಿಗೆ ಆಗಮಿಸಿ ನಮಗೆ, ನಮ್ಮ ನಾಯಕರಿಗೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದರು.grama panchayath- election  - workers -necessary –message-KPCC President -DK Sivakumar

‘ಡಿ.ಜೆ ಹಳ್ಳಿ ಪ್ರಕರಣದಲ್ಲಿ ಜಾಕಿರ್ ಅವರು ಬಂಧನದ ವಿಚಾರವನ್ನು ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.

Key words: grama panchayath- election  – workers -necessary –message-KPCC President -DK Sivakumar