ಗಣೇಶ ಮೂರ್ತಿಗಳ ಮಾರಾಟಕ್ಕೆ ಅನುಮತಿ ನೀಡಿ: ಇಲ್ಲವೇ ಪರಿಹಾರ ಘೋಷಿಸಿ- ಸಿಎಂಗೆ ಕುಂಬಾರ ಕುಟುಂಬಗಳ ಮನವಿ….

Promotion

ಬೆಂಗಳೂರು,ಜು,29,2020(www.justkannada.in): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಜೋರಾಗಿದ್ದು ಈ ಹಿನ್ನೆಲೆ ಈ ಬಾರಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಿಸದಂತೆ ಸರ್ಕಾರ ಸೂಚಿಸಿದೆ. ಈ ಮಧ್ಯೆ ಗಣೇಶ ಮೂರ್ತಿಗಳನ್ನ ಮಾರಾಟ ಮಾಡಲು ಅನುಮತಿ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ ಕುಂಬಾರ ಕುಟುಂಬಗಳು ಮನವಿ ಮಾಡಿವೆ.jk-logo-justkannada-logo

ಬೆಂಗಳೂರಿನ ಪಾಟರಿ ಟೌನ್ ನಲ್ಲಿರುವ ಕುಂಬಾರ ವರ್ಗದ ಕುಟುಂಬಗಳು ಗಣೇಶ ಮೂರ್ತಿಗಳನ್ನ ಮಾರಾಟ ಮಾಡಲು ಅನುಮತಿ ನೀಡುವಂತೆ ಸಿಎಂ ಬಿಎಸ್ ಯಡಿಯೂರಪ್ಪಗೆ  ಮನವಿ ಮಾಡಿವೆ. ಗೌರಿ ಗಣೇಶ್ ಹಬ್ಬ ಹಿನ್ನೆಲೆ ಮೂರ್ತಿಗಳನ್ನ ತಯಾರು ಮಾಡಿದ್ದೇವೆ. 300ಕ್ಕೂ ಹೆಚ್ಚು ಕುಟುಂಬಗಳು ಕುಂಬಾರಿಕೆಯನ್ನ ಅವಲಂಬಿಸಿವೆ. ಆದರೆ ಕೊರೋನಾದಿಂದಾಗಿ ಗಣೇಶ ಮೂರ್ತಿಗಳನ್ನ ಮಾರಾಟ ಮಾಡಲು ಅವಕಾಶ ನೀಡಿಲ್ಲ.gowri-ganesha-festival-kumbara-cm-bs-yeddyurappa

ಗಣೇಶ ಮೂರ್ತಿ ತಯಾರಿಕೆಗೆ  ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ಹೀಗಾಗಿ ಮೂರ್ತಿಗಳನ್ನ ಮಾರಾಟ ಮಾಡಲು ಅನುಮತಿ ನೀಡಿ ಇಲ್ಲವೇ ನಮಗೆ ಪರಿಹಾರವನ್ನ ಘೋಷಣೆ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕುಂಬಾರ ಕುಟುಂಬಗಳು ಮನವಿ ಮಾಡಿವೆ.

Key words: gowri ganesha-festival-kumbara-cm-bs yeddyurappa