ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್’ಗೆ ಸರಕಾರ ಪ್ಲಾನ್

Promotion

ಬೆಂಗಳೂರು, ಏಪ್ರಿಲ್ 10, 2020 (www.justkannada.in): ರಾಜ್ಯದಲ್ಲಿ ಲಾಕ್ ಡೌನ್ ನಂತ್ರ, ಇದೀಗ ಸೀಲ್ ಡೌನ್ ಗೆ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದ 18 ಜಿಲ್ಲೆಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಜಿಲ್ಲಾಢಳಿತದೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ಈಗಾಗಲೇ ಅಂತಿಮ ಹಂತದ ಸಿದ್ಧತೆಯನ್ನು ಮಾಡಿಕೊಂಡಿದೆ.

ಈಗಾಗಲೇ ಬೆಂಗಳೂರಿನ ಎರಡು ವಾರ್ಡ್ ಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಬೆಂಗಳೂರು ನಗರದ ಪಾದರಾಯನಪುರ ವಾರ್ಡ್ ಮತ್ತು ಬಾಪೂಜಿನಗರ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಒಂದು ವೇಳೆ ಈ ನಿಯಮ ಮೀರಿ ಹೊರಗೆ ಬರುವವರನ್ನು ವಾಹನ ಸಮೇತ ಸೀಲ್ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲೇ ರಾಜ್ಯದ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾದಂತ ಜಿಲ್ಲೆಗಳಲ್ಲೂ ನಡೆಸಲು ತಯಾರಿ ನಡೆಸಿದೆ. ಈ ಕುರಿತಂತೆ ರಾಜ್ಯ 18 ಜಿಲ್ಲಾಡಳಿತಗಳೊಂದಿಗೆ ಮಾತುಕತೆಯನ್ನು ಸರ್ಕಾರ ನಡೆಸಿದೆ.