ಮೂಗಿನ ಮೂಲಕ ನೀಡುವ  ನೇಸಲ್ ವ್ಯಾಕ್ಸಿನ್ ಗೆ ಸರ್ಕಾರ ಗ್ರೀನ್ ಸಿಗ್ನಲ್.

Promotion

ನವದೆಹಲಿ,ಡಿಸೆಂಬರ್,23,2022(www.justkannada.in):  ಕೋವಿಡ್ ಭೀತಿ ಶುರವಾದ ಹಿನ್ನೆಲೆ ಬೂಸ್ಟರ್ ಡೋಸ್ ಪಡೆಯುವಂತೆ ದೇಶದ ಜನರಿಗೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು ಈ ನಡುವೆ ಮೂಗಿನ ಮೂಲಕ ನೀಡುವ  ನೇಸಲ್ ವ್ಯಾಕ್ಸಿನ್ ಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ನೇಸಲ್ ವ್ಯಾಕ್ಸಿನ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಂಜೆಕ್ಷನ್ ಬದಲು ಮೂಗಿನ ಮೂಲಕ ಈ ಲಸಿಕೆ ಪಡೆಯಬಹುದಾಗಿದೆ.

ಇಂದಿನಿಂದಲೇ ವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಸೂಚನೆ ನೀಡಿದೆ.  18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆಗಿ ಇದನ್ನು ನೀಡಲು ಸಿದ್ಧತೆ ನಡೆಸಲಾಗಿದೆ. ಈಗ ಕಂಡು ಬರುತ್ತಿರುವ ಓಮಿಕ್ರಾನ್ ಉಪತಳಿ BF.7 ಗೆ ನಾಸಲ್ ವ್ಯಾಕ್ಸಿನ್ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

Key words: Govt -green signal – nasal vaccine-covid