ಹೊಯ್ಸಳ ವಾಸ್ತುಶಿಲ್ಪ ಶೈಲಿ ಕಂಡು ವಿಸ್ಮಿತರಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್.

Promotion

ಹಾಸನ, ಜೂನ್,17,2022(www.justkannada.in):  ರಾಜ್ಯದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶುಕ್ರವಾರ ಹೊಯ್ಸಳ ಅರಸರ ರಾಜಕೀಯ ಕಾರ್ಯಕ್ಷೇತ್ರವಾಗಿದ್ದ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೆಬೀಡು ದೇವಾಲಯಗಳಿಗೆ ಭೇಟಿ ನೀಡಿದರು.

ಐತಿಹಾಸಿಕ ವಿಶೇಷತೆಯ, ಒಂದು ಕಾಲದಲ್ಲಿ  ಹೊಯ್ಸಳ ವಾಸ್ತು ಶಿಲ್ಪ ಶೈಲಿಯ ಕಂಡು ಥಾವರ್ ಚಂದ್ ಗೆಹ್ಲೋಟ್ ಅವರು ವಿಸ್ಮಿತರಾದರು. ಗೈಡ್ ಅಸ್ಲಾಮ್ ಷರಿಫ್ ಅವರು ಬೇಲೂರು, ಹಳೇಬೀಡು ಶಿಲ್ಪಶೈಲಿ ಕುರಿತು ರಾಜ್ಯಪಾಲರಿಗೆ ವಿವರಿಸಿದರು. ನಂತರ ಚೇನ್ನಕೇಶವ ಹಾಗೂ ಹೊಯ್ಸಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಗಳ ಅರ್ಚಕರು ರಾಜ್ಯಪಾಲರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಲಿಂಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎನ್ ನಂದಿನಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಭಯಲ್, ತಹಸೀಲ್ದಾರ್ ಮೋಹನ್, ಚೆನ್ನಕೇಶವ ದೇವಾಲಯದ ಆಡಳಿತ ಅಧಿಕಾರಿ ವಿಧ್ಯುಲ್ಲತಾ, ಚೆನ್ನಕೇಶವ ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಡಾ. ನಾರಾಯಣಸ್ವಾಮಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Key words: Governor-Thawarchand Gehlot –visit-  Beluru-Halebidu

ENGLISH SUMMARY…

Karnataka Governor visited Beluru, Halebidu

Hasan June17, 2022: Hon’ble Governor of Karnataka Shri Thaawarchand Gehlot visited the world-famous sacred ensembles of Hoysala architect Temples Belur, Halebidu today.

He performed special puja at Chennakeshava and Hoysaleswara temple.

MLA Lingesh, DC R. Girish, SP Srinivas Gowda, CEO Kantharaju, Additional District Superintendent of Police BN Nandini, AC Pratik Bhayal, Administrative Officer of Chennakeshava Temple Vidhyulatha, Chairperson of the Managing Committee of Chennakeshava Temple Narayanaswamy and other dignitaries were present.