ಸರ್ಕಾರದ ಇಚ್ಚಾಶಕ್ತಿಯ ಕೊರತೆ, ಮೈಸೂರಿನ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ : ರೈತ ಮುಖಂಡ ಬಡಗಲಪುರ ನಾಗೇಂದ್ರ ಆಕ್ರೋಶ 

Promotion

ಬೆಂಗಳೂರು,ಏಪ್ರಿಲ್,01,2021(www.justkannada.in) :  ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದ ಮೈಸೂರಿನ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ. ಕೆ.ಆರ್.ಆಸ್ಪತ್ರೆ ಮತ್ತು ಚಲುವಾಂಬ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು. 100ವರ್ಷಗಳ ಇತಿಹಾಸವುಳ್ಳ ಆಸ್ಪತ್ರೆ ಅವ್ಯವಸ್ಥೆಗೆ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶವ್ಯಕ್ತಪಡಿಸಿದರು.

Illegally,Sand,carrying,Truck,Seized,arrest,driver

ಕೆ.ಆರ್.ಆಸ್ಪತ್ರೆಗೆ ಪ್ರತಿದಿನ 8 ಸಾವಿರ ಜ‌ನ ಭೇಟಿ ನೀಡುತ್ತಾರೆ. ಆದರೆ, ಆಸ್ಪತ್ರೆ ಆವರಣದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲ. ಕೆಟ್ಟ ವಾತಾವರಣದಿಂದ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ವೈದ್ಯಕೀಯ ಉಪಕರಣಗಳ ಕೊರತೆ ಇರುವ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.

ಕೋವಿಡ್ ನೆಪವೊಡ್ಡಿ ಆಸ್ಪತ್ರೆಗಳ ಅಭಿವೃದ್ಧಿಗೆ ನಿರ್ಲಕ್ಷ್ಯGovernment,willpower,Lack,Mysore,hospitals,mess,peasant,leader,Badagalpur Nagendraತುಳಸಿದಾಸ ಆಸ್ಪತ್ರೆ ಕಾಮಗಾರಿ ಆರಂಭಿಸಿ ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆ.ಆರ್.ಆಸ್ಪತ್ರೆ ಒತ್ತಡ ಕಡಿಮೆ ಮಾಡುವ ಟ್ರಾಮಾ ಕೇರ್ ಸೆಂಟರ್ ಇನ್ನೂ ಪ್ರಾರಂಭ ಆಗಿಲ್ಲ. ಕೋವಿಡ್ ನೆಪವೊಡ್ಡಿ ಆಸ್ಪತ್ರೆಗಳ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಕೂಡಲೇ ನಗರದಲ್ಲಿನ ಆಸ್ಪತ್ರೆಗಳ ಕೊರತೆ, ಮೂಲಭೂತ ಸೌಕರ್ಯದ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

key words : Government-willpower-Lack-Mysore-hospitals-mess-peasant-leader-Badagalpur Nagendra