ಎಲೆಕ್ಟ್ರಾನಿಕ್ ಉತ್ಪಾದಕರಿಗೆ ಸರಕಾರದ “ಬಂಪರ್” ಆಫರ್

Promotion

ಬೆಂಗಳೂರು, ಸೆಪ್ಟೆಂಬರ್, 04,2020(www.just.kannada.in) ; ವಿದ್ಯುನ್ಮಾನ ಉತ್ಪನ್ನಗಳ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಇಎಸ್ ಡಿಎಂ ಉದ್ಯಮದ ಬೆಳವಣಿಗೆಯ ವೇಗ ಹೆಚ್ಚಿಸುವ ಧ್ಯೇಯದೊಂದಿಗೆ ಇಎಸ್ ಡಿಎಂ ಮೌಲ್ಯ ಸರಪಳಿಯಲ್ಲಿ ಸ್ಥಳೀಯ ಉತ್ಪಾದನೆ ಮತ್ತು ರಪ್ತುಗಳನ್ನು ಉತ್ತೇಜಿಸಲು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ(ಎಂಇಐಟಿವೈ)ವು National Policy on Electronics 2019(NPE2019)ಅನ್ನು ಘೋಷಿಸಿದೆ.jk-logo-justkannada-logo

ರಾಷ್ಟ್ರದಲ್ಲಿ ಇಎಸ್ ಡಿಎಂ ವಲಯದ ವರ್ಧನೆಗಾಗಿ ಸದರಿ ಕಾರ್ಯ ನೀತಿಯ ಆಧಾರದ ಮೇಲೆ ಕೇಂದ್ರ ಸರಕಾರವು ಮೂರು ಯೋಜನೆಗಳನ್ನು ಹೊರತಂದಿದೆ. ಅವುಗಳೆಂದರೆ, Scheme for Promotion of manufacturing of Electronics Components and Semiconductors (SPECS), Production Linked Incentive (PLI) and Electronics Manufacturing Clusters 2 ಯೋಜನೆಗಳಾಗಿದೆ.

government's-"bumper"-offer-electronic-manufacturers

ಹೊಸ ಹೂಡಿಕೆಗಳಿಗಾಗಿ, ವಿಸ್ತಾರಗೊಳಿಸಲು, ಆಧುನೀಕರಣಗೊಳಿಸಲು ಮತ್ತು ಸ್ಥಳಾಂತರಿಸಲು ಅಥವಾ ಇನ್ಯಾವುದೇ ರೀತಿಯಲ್ಲಿ ಕಾರ್ಯೋನ್ಮುಕರಾಗಲು ಸದವಕಾಶಗಳಿಗಾಗಿ ಕಾಯುತ್ತಿರುವ ವಿದ್ಯುನ್ಮಾನ ತಯಾರಕಾ ಘಟಕಗಳನ್ನು ಆಕರ್ಷಿಸಲು ರಾಜ್ಯಗಳಿಗೂ ತಮ್ಮದೆಯಾದ ಸಮಾನ ಹೋಲುವಂತಹ ಯೋಜನೆಗಳನ್ನು ಹೊರತರಲು ಉತ್ತೇಜನ ನೀಡಲಾಗಿದೆ.

ಪ್ರಸ್ತುತವಿರುವ ಘಟಕಗಳನ್ನು ವಿಸ್ತಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಡುವ ಹೊಸ ಹೂಡಿಕೆಗಳಿಗಾಗಿ, ಸದರಿ ಯೋಜನೆಯ ಘೋಷಣೆಯಾದ ದಿನಾಂಕದಿಂದ 5 ವರ್ಷಗಳ ಅವಧಿವರೆಗೆ “ಇ.ಎಸ್.ಡಿ.ಎಂ. ವಲಯಕ್ಕಾಗಿರುವ ವಿಶೇಷ ಪ್ರೋತ್ಸಾಹಕಗಳ ಯೋಜನೆ” ಯು ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರದ ಯಾವುದೇ ಕಾರ್ಯನೀತಿಯಡಿ ಕಲ್ಪಿಸಲಾಗಿರುವ ಪ್ರೋತ್ಸಾಹಕಗಳು ಮತ್ತು ಸಬ್ಸಿಡಿಗಳಿಗೆ ಹೆಚ್ಚುವರಿಯಾಗಿ “Special Incentives Scheme for ESDM Sector” ಪಡೆಯಬಹುದಾಗಿದೆ. ಈ ಪ್ರೋತ್ಸಾಹಕಗಳ ಪ್ಯಾಕೇಜನ್ನು ಪಡೆಯುವ ಕೈಗಾರಿಕೆಗಳು ರಾಜ್ಯ ಸರ್ಕಾರದ ಇನ್ಯಾವುದೇ ಕಾರ್ಯನೀತಿಯಡಿ ಬರುವ ಪ್ರೋತ್ಸಾಹಕಗಳನ್ನು ಪಡೆಯುವಂತಿಲ್ಲ ಎಂದು ಸೂಚಿಸಲಾಗಿದೆ.

ಪ್ರೋತ್ಸಾಹಕಗಳಿಗೆ ಅರ್ಹವಾಗುವ ಉತ್ಪನ್ನಗಳು,  ಚಟುವಟಿಕೆಗಳೆಂದರೆ

ವಿದ್ಯುನ್ಮಾನ ಉತ್ಪನ್ನಗಳ ತಯಾರಿಕೆ ಹಾಗೂ ಅಥವಾ ವಿನ್ಯಾಸ, ಅರೆವಾಹಕಗಳ ತಯಾರಿಕೆ ಮತ್ತು ವಿನ್ಯಾಸ, ವಿದ್ಯುನ್ಮಾನ ತಯಾರಿಕಾ ಸೇವೆಗಳು, ಸೌರಶಕ್ತಿ ಸೆಲ್ ಗಳ ತಯಾರಿಕೆ,  ಎಲ್.ಇ.ಡಿ,  ವಿದ್ಯುನ್ಮಾನ ಉತ್ಪನ್ನಗಳ ಕುರಿತ ರಾಷ್ಟ್ರೀಯ ಕಾರ್ಯನೀತಿಯಲ್ಲಿ ಒಳಗೊಂಡಿವೆ.

43 ಸಾವಿರ ನೇರ ಉದ್ಯೋಗವನ್ನು ಸೃಷ್ಟಿಯ ವಿಶ್ವಾಸ

ಸದರಿ ಯೋಜನೆಯ ಮೂಲಕ ರಾಜ್ಯ ಸರಕಾರಕ್ಕೆ 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಮುಂದಿನ 5 ವರ್ಷಗಳ ಅವಧಿಯಲ್ಲಿ 43 ಸಾವಿರ ನೇರ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವಾಗಿದೆ ಎಂದು ತಿಳಿಸಲಾಗಿದೆ.

key words ; government’s-“bumper”-offer-electronic-manufacturers