ಇದು ರಿವರ್ಸ್ ಗೇರ್ ಸರ್ಕಾರ, ಸೇಡಿನ ಕ್ರಮ‌ ಮಾಡ್ತಿದೆ – ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ.

Promotion

ಬೆಂಗಳೂರು,ಮೇ,25,2023(www.justkannada.in): ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆ, ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಬಿಲ್ ಆದೇಶ ಪರಿಷ್ಕರಿಸಿ ವಾಪಸ್ ಪಡೆಯುವುದಾಗಿ ಹೇಳಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲವನ್ನೂ ಬದಲಾಯಿಸುತ್ತೇವೆ ಅನ್ನೋದು ದುರಹಂಕಾರದ ಮಾತು. ಇದು ರಿವರ್ಸ್ ಗೇರ್ ಸರ್ಕಾರ. ಗ್ಯಾರಂಟಿಯಲ್ಲೂ ಕಾಂಗ್ರೆಸ್ ಸರ್ಕಾರ ರಿವರ್ಸ್ ಹೋಗುತ್ತಿದೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಿದೆ. ರಿವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ, ಸೇಡಿನ ಕ್ರಮ‌ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತೆ ಅಂತಾ ಗೊತ್ತಿದೆ. ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ​​ಗೆ ಅಧಿಕಾರ ಇದೆ, ಏನು ಮಾಡುತ್ತಾರೆ ನೋಡೋಣ. ಸಾರ್ವತ್ರಿಕವಾಗಿ ಜನರಿಗೆ ಅನ್ಯಾಯವಾದ್ರೆ ಹೋರಾಟ ಮಾಡುತ್ತೇವೆ. ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: government -reverse –gear- Former CM- Basavaraja Bommai