ಖಾಸಗಿ ಬ್ಯಾಂಕುಗಳಿಂದ ಎದುರಾಗುವ ಸಮಸ್ಯೆ ಪರಿಹರಿಸಲು ಸರ್ಕಾರ ಸಿದ್ಧ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ….

ಬೆಂಗಳೂರು,ಮಾರ್ಚ್,24,2021(www.justkannada.in):  ಖಾಸಗಿ ಬ್ಯಾಂಕುಗಳಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗಿದ್ದರೂ ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಹಾಗೂ ವಿಧಾನಪರಿಷತ್ ಆಡಳಿತ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.jk

ಜೆಡಿಎಸ್ ಸದಸ್ಯ ಎಚ್ ಎಂ ರಮೇಶ್ ಗೌಡ ವಿಧಾನಪರಿಷತ್ ನಲ್ಲಿ ನಿಯಮ 330ರಡಿ ಗಮನಸೆಳೆದ ವಿಚಾರದ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಪರವಾಗಿ ಉತ್ತರ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, , ಎಚ್ ಡಿಎಫ್ ಸಿ ಸೇರಿದಂತೆ ಹಲವು ಖಾಸಗಿ ಬ್ಯಾಂಕ್ ನಿಂದ ಸಮಸ್ಯೆಗೆ ಒಳಗಾಗಿರುವ ಗ್ರಾಹಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ರಾಜ್ಯಮಟ್ಟದ ನಾಯಕರನ್ನು ಕಳುಹಿಸಿಕೊಡುತ್ತೇವೆ ಮತ್ತು ಸಮಸ್ಯೆ ಪರಿಹಾರಕ್ಕೆ ಅತ್ಯಂತ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಸದನದ ಗಮನ ಸೆಳೆದ ರಮೇಶ್ ಗೌಡ, ರಾಜ್ಯದಲ್ಲಿ ಸುಮಾರು ಖಾಸಗಿ ಬ್ಯಾಂಕುಗಳು ಸಾರ್ವಜನಿಕರಿಗೆ ಅತಿಯಾದ ಆಮಿಷಗಳನ್ನು ಒಡ್ಡಿ, ಯಾವುದೇ ತೊಂದರೆಗಳನ್ನು ನೀಡಲ್ಲ ಎಂಬ ಭರವಸೆ ನೀಡಿ ಎಲ್ಲೆಂದರಲ್ಲಿ ಸಹಿ ಪಡೆದು ಸಾಲ ನೀಡುತ್ತಿದ್ದು, ತದನಂತರ ನಾಗರಿಕರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಾರೆ. ಪದೇಪದೇ ನಾಗರೀಕರಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ನೊಂದ ನಾಗರಿಕರು ಆತ್ಮಹತ್ಯೆಗೆ ಶರಣಾದ ನಿದರ್ಶನವಿದೆ. ಇನ್ನೊಂದೆಡೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಬ್ಯಾಂಕಿಗೆ ಭೇಟಿಕೊಟ್ಟ ಸಂದರ್ಭಗಳಲ್ಲಿ ಅಲ್ಲಿನ ಸಿಬ್ಬಂದಿ ವರ್ಗದವರು ಮತ್ತೊಂದು ತಿಂಗಳ ಬಡ್ಡಿಯ ಆಸೆಗಾಗಿ ಮುಂದಿನ ತಿಂಗಳು ಬಂದು ಸಾಲ ಮರುಪಾವತಿ ಮಾಡಿ ಎಂದು ಸಬೂಬು ಹೇಳುತ್ತಾ ಮುಂದೂಡುತ್ತಾರೆ. ಒಂದೊಮ್ಮೆ ಸಕಾಲಕ್ಕೆ ಸಾಲ ಮರುಪಾವತಿ ಮಾಡಿದ್ದರು ಅದನ್ನು ಒಂದು ತಿಂಗಳ ನಂತರ ಆವತಿ ಪಡೆದು ಅದರ ಮೇಲೆ ಬಡ್ಡಿ ವಿಧಿಸುತ್ತಾ ನಾಗರಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

government-ready-solve-problem-private-banks-minister-kota-srinivasa-poojary
ಕೃಪೆ-internet

ಈ ವಿಚಾರವನ್ನು ಫೆಬ್ರುವರಿ 19 ರಂದು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯವರ ಗಮನಕ್ಕೆ ತರಲಾಗಿದೆ. ಈ ವಿಷಯಗಳ ಬಗ್ಗೆ ಮಾರ್ಚ್ 19ರಂದು ಪತ್ರ ಬರೆದು ನಾಗರಿಕರಿಗೆ ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಬಾರದೆಂದು ತಿಳಿಸಿದ್ದಾರೆ. ಸಾಲ ಮರುಪಾವತಿ ಮಾಡುವ ಆಯ್ಕೆ ಸಾಲಗಾರರದ್ದಾಗಿದ್ದು, ಸಾಲ ಮರುಪಾವತಿಯನ್ನು ನಿರಾಕರಿಸುವುದು ಸ್ವೀಕಾರಾರ್ಹವಲ್ಲ ಎಂದು ತಮ್ಮ ಪತ್ರದಲ್ಲಿ ಸಂಚಾಲಕರು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯವರು ಎಚ್‌ಡಿಎಫ್ಸಿ ಮತ್ತು ಇನ್ನಿತರ ಖಾಸಗಿ ಬ್ಯಾಂಕುಗಳ ರಾಜ್ಯ ಮಟ್ಟದ ಸಮನ್ವಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಮಹಾ ಪ್ರಬಂಧಕರು ಈ ವಿಷಯವನ್ನು ಮುಂದಿನ ಕ್ರಮಕ್ಕಾಗಿ ತಮ್ಮ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದ್ದಾರೆ.  ನಿರ್ದಿಷ್ಟ ದೂರುಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು  ತಿಳಿಸಿದ್ದಾರೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ENGLISH SUMMARY…

Government committed to solve problems of people faced by private banks: Minister Kota Srinivasa Poojari
Bengaluru, Mar. 24, 2021 (www.justkannada.in): “Our Government is committed to solve any kind of problems that people may face from private banks,” opined Kota Srinivasa Poojari, Minister and Leader of the Opposition in the Legislative Council.
In his reply on behalf of the Chief Minister B.S. Yedyurappa, with respect to a question raised by JDS member H.M. Ramesh Gowda in the Legislative Assembly under Rule 330, he said, “We will send state-level leaders to the place where protestors are demonstrating against several problems that they are facing from several banks including HDFC Bank, and take all necessary measures to solve the problems as early as possible.”

government-ready-solve-problem-private-banks-minister-kota-srinivasa-poojary
ಕೃಪೆ-internet

JDS MLC Ramesh Gowda alleged that several private banks were fleecing the people by luring them to avail loans by assuring that they won’t face any problems. “But once they get signatures on the documents they start harassing the customers in the name of recovery of loans. Complaints of physical and mental harassment are increasing and there are also examples where many people have committed suicide unable to tolerate the torture of the bank recovery men,” he explained.
Keywords: Govt. committed to solve problems of people/ problems faced by banks/ HDFC Bank MLC Ramesh Gowda/ Minister Kota Srinivasa Poojari

Key words:  government – ready -solve – problem – private banks-Minister -Kota Srinivasa Poojary.