ಸ್ವಾತಂತ್ರ್ಯೋತ್ಸವ ಸರಳವಾಗಿ ಆಚರಿಸಲು ಸರ್ಕಾರ ಆದೇಶ: ಜಿಲ್ಲಾ ಕೇಂದ್ರಗಳಲ್ಲಿ  ಡಿಸಿಗಳಿಂದ ಧ್ವಜಾರೋಹಣ…..

Promotion

ಬೆಂಗಳೂರು,ಆ,13,2019(www.justkannada.in):  ರಾಜ್ಯದಲ್ಲಿ ಭೀಕರ ಪ್ರವಾಹ ಧಾರಾಕಾರ ಮಳೆಯಿಂದಾಗಿ ಜನರು ತತ್ತರಿಸಿರುವ ಹಿನ್ನೆಲೆ ಸ್ವಾತಂತ್ರ್ಯೋತ್ಸವ ದಿನಾಚಾರಣೆಯನ್ನ ಸರಳವಾಗಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.  ಅಗಸ್ಟ್ 15 ರಂದು ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಬೇಕು, ಉಪ ವಿಭಾಗಗಳಲ್ಲಿ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳಲ್ಲಿ ತಹಸೀಲ್ದಾರ್ ಅವರು ಧ್ವಜಾರೋಹಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ

Key words: Government -order – Simply-celebrate- Independence Day.