ಬ್ಯಾಂಕ್ ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರ್ಕಾರದ ತೀವ್ರ ನಿಗಾ: ಡಿಪಾಸಿಟ್ ವಿಮೆ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ…

kannada t-shirts

ನವದೆಹಲಿ,ಫೇ,1,2020(www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ಬ್ಯಾಂಕ್‌ ಠೇವಣಿದಾರರಿಗೆ  ಸಿಹಿಸುದ್ದಿ ನೀಡಿದ್ದಾರೆ.

ಬ್ಯಾಂಕ್‌ ಠೇವಣಿಗಳ ಮೇಲಿನ ವಿಮೆ ಸುರಕ್ಷಾ ಮೊತ್ತವನ್ನು ಈಗಿರುವ ಒಂದು ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದ್ದು, ಗ್ರಾಹಕರ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಠೇವಣಿದಾರರಿಗೆ ವಿಮಾ ಭದ್ರತೆ ಸೌಲಭ್ಯ 5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಠೇವಣಿದಾರರಿಗೆ ಅನ್ವಯವಾಗುವಂತೆ ಮಿತಿ ಹೆಚ್ಚಳ ಮಾಡಲಾಗಿದೆ. ಬ್ಯಾಂಕ್ ಗಳ ಆರ್ಥಿಕ ಸ್ಥಿತಿಗತಿಗಳ ಮೇಲೆ ಸರಕಾರದ ತೀವ್ರ ನಿಗಾ ಇಡಲಾಗುವುದು .ಕೌಶಲಾಭಿವೃದ್ಧಿ ಯೋಜನೆಗಳ ಉತ್ತೇಜನಕ್ಕಾಗಿ 3000 ಕೋಟಿ ರೂಪಾಯಿಗಳ ಅನುದಾನ ನೀಡಲಾಗುತ್ತದೆ. ಐಡಿಬಿಐ (IDBI)ಬ್ಯಾಂಕ್ ಸಂಪೂರ್ಣ ಖಾಸಗೀಕರಣ ಮಾಡಲಾಗುತ್ತದೆ. ಹಣದ ಹರಿವಿನ ಪ್ರಮಾಣ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನು ಎಲ್.ಐ.ಸಿ.(LIC)ಯಲ್ಲಿರುವ ಸರಕಾರಿ ಹೂಡಿಕೆಯಲ್ಲಿ ಅಲ್ಪ ಪಾಲು ಮಾರಾಟ ಮಾಡಲಾಗುವುದು. 2020ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿ 3.8% ಆಗಿದ್ದರೆ 2021ರಲ್ಲಿ ವಿತ್ತೀಯ ಕೊರತೆಯನ್ನು3.5%ಕ್ಕೆ ಇಳಿಸುವ ಗುರಿ ಹೊಂದಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

Key words: Government — financial condition –banks-Deposit- insurance – increase – Rs 1 lakh to Rs 5 lakh

website developers in mysore