ಮತಾಂಧ ಶಕ್ತಿಗಳ ಪರ ಸರ್ಕಾರ ಇದೆ: ಸಿಎಂ ಸಿದ್ಧರಾಮಯ್ಯ ಋಣ ತೀರಿಸೋಕೆ ನಿಂತಿದ್ದಾರೆ- ಮಾಜಿ ಸಚಿವ ಸಿಟಿ ರವಿ ವಾಗ್ದಾಳಿ.

Promotion

ಬೆಂಗಳೂರು,ಅಕ್ಟೋಬರ್,4,2023(www.justkannada.in): ಶಿವಮೊಗ್ಗದ ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ ರವಿ, ಸಿಎಂ ಸಿದ್ಧರಾಮಯ್ಯ ಋಣ ತೀರಿಸೋಕೆ ನಿಂತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ಮೀಸಲು ಇಟ್ಟಿದ್ದಾರೆ ಸಿಎಂ ಕೋಮುವಾದಿ ರಾಜಕಾರಣ ಮಾಡುತ್ತಿದ್ದಾರೆ.   ಮುಸ್ಲೀ ಒಲೈಸೋದೆ ಸಿದ್ದರಾಮಯ್ಯಗೆ ಕೆಲಸವಾ..?  ಎಂದು ಕಿಡಿಕಾರಿದರು

ಟಿಪು ಖಡ್ದ ಮೇಲೆ ಏನಿದೆ. ಕಾಫೀರರ ರಕ್ತ ಕುಡಿಯಲು ನನ್ನ ಖಡ್ಗ ಹಪಿಸುತ್ತಿದೆ ಎಂಬ ಬರಹವಿದೆ. ಕಾಫಿರರು ಎಂದರೇ  ಹಿಂದೂಗಳು. ಸಿದ್ಧರಾಮಯ್ಯನವರು ಸಹ ನಾನು ಹಿಂದೂ ಎಂದು ಹೇಳಿದ್ದರು ಎಂದರು.

ಬಾಲ ಕಟ್ ಮಾಡುತ್ತೇವೆ ಎಂದಿದ್ದ ಪ್ರಿಯಾಂಕ್ ಖರ್ಗೆ ಎಲ್ಲಿದ್ದೀರಾ..? ಮತಾಂದ ಶಕ್ತಿ ವಿಜೃಂಬಿಸಲು ಬಿಟ್ಟಿದ್ದೀರಿ.  ಮತಾಂಧ  ಶಕ್ತಿಗಳ ಪರ ಸರ್ಕಾರ ನಿಂತಿದೆ. ಪರಮೇಶ್ವರ್ ನಿವ್ಯಾಕೆ ಇಷ್ಟು ದುರ್ಬಲ ಆದ್ರಿ. ಈಗ  ಟ್ರೈಲರ್ ತೋರಿಸಿದ್ದಾರೆ ಪಿಚ್ಚರ್ ಬಾಕಿ ಇದೆ ಎಂದು ವಾಗ್ದಾಳಿ ನಡೆಸಿದರು.

Key words: government – favor – bigoted forces- CM Siddaramaiah-CT Ravi