ಮುಷ್ಕರ ಕೈಬಿಡಲ್ಲ: ಸಿಎಂ ಅಂತಿಮ ನಿರ್ಧಾರ ಏನೆಂಬುದನ್ನು ನೋಡಿ ನಿರ್ಧಾರ- ಸಿ.ಎಸ್ ಷಡಾಕ್ಷರಿ.

Promotion

ಬೆಂಗಳೂರು,ಮಾರ್ಚ್,1,2023(www.justkannada.in):  7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರ ಪರಿಣಾ ರಾಜ್ಯದ ಜನರ ಮೇಲೆ ಬೀರಿದ್ದು, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದರೆ ಇತ್ತ ಇಂದು ನಡೆಯಬೇಕಿದ್ದ ಹಲವು ಪರೀಕ್ಷೆಗಳು ಮುಂದೂಡಿಕೆಯಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎಸ್ ಷಡಾಕ್ಷರಿ, ಸಿಎಂ ಬೊಮ್ಮಾಯಿ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ.  ಸಿಎಂ ಬೊಮ್ಮಾಯಿ ಕಾಲಾವಕಾಶ ಕೇಳಿದ್ದಾರೆ. ಸರ್ಕಾರ ಬೇಡಿಕೆ ಈಡೇರಿಸುತ್ತೆ ಎಂಬ ಭರವಸೆ ಇದೆ ಎಂದರು.

ಮುಷ್ಕರ ಕೈಬಿಡಲ್ಲ. 11 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶ ಅಲ್ಲ.ಸಿಎಂ ಏನು ಹೇಳ್ತಾರೆ ಅನ್ನೋದು ನೋಡಿ ನಮ್ಮ ತೀರ್ಮಾನವಾಗಲಿದೆ.  ಇನ್ನೂ 2 ಗಂಟೆಯಲ್ಲಿ ಎಲ್ಲ ನಿರ್ಧಾರ ಆಗುತ್ತೆ ಎಂದು ಸಿ.ಎಸ್ ಷಡಾಕ್ಷರಿ ತಿಳಿಸಿದರು.

ಬಿಬಿಎಂಪಿ ಅಧಿಕಾರಿಳು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯುತ್ತೆ. ಏನೇ ತೀರ್ಮಾನ ಕೈಗೊಂಡರೂ ಮುಷ್ಕರ ಮುಂದುವರೆಯುತ್ತೆ.  ಮುಷ್ಕರಕ್ಕೆ ಕರೆ ನೀಡಿದ ಕಾರಣ ಯಾರೂ ಕಚೇರಿಗೆ ಹಾಜರಾಗಿಲ್ಲ. ಸಿಎಂ ಅಂತಿಮ ತೀರ್ಮಾನದ ನಂತರ ನಮ್ಮ ನಿರ್ಧಾರ ಎಂದರು.

Key words: Government -employees.-Strike – CM’s- final decision – CS Shadakshari.