ಸರ್ಕಾರದಿಂದ ಅವೈಜ್ಞಾನಿಕ ನಿಯಮ ಜಾರಿ: ನೈಟ್ ಕರ್ಫ್ಯೂ ವಾಪಸ್ ಗೆ ಡಿಕೆ ಶಿವಕುಮಾರ್ ಆಗ್ರಹ.

Promotion

ಬೆಂಗಳೂರು,ಜನವರಿ,22,2022(www.justkannada.in):  ಕೊರೊನಾ ತಡೆಗಾಗಿ ಸರ್ಕಾರ ಅವೈಜ್ಞಾನಿಕ ನಿಯಮಗಳನ್ನ ಜಾರಿ ಮಾಡುತ್ತಿದೆ ಎಂದು ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ನೈಟ್ ಕರ್ಫ್ಯೂ ವಾಪಸ್ ಪಡೆಯುವಂತೆ  ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕೊರೋನಾ ಕಡಿಮೆ ಇದ್ದಾಗ ವೀಕೆಂಡ್ ಲಾಕ್ ಮಾಡಿದ್ರು. ಸರ್ಕಾರ ಅವೈಜ್ಞಾನಿಕ ನಿಯಮ ಜಾರಿ ಮಾಡುತ್ತಿದೆ.  ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನ ನೋಡಬೇಕು.  ಆಂದ್ರ ತೆಲಂಗಾಣದಲ್ಲಿ ಯಾವುದೇ ಕರ್ಫ್ಯೂ ಇಲ್ಲ. ರಾಜ್ಯದಲ್ಲಿ ಯಾಕೆ ಕರ್ಪ್ಯೂ ಜಾರಿ ಮಾಡಿದ್ದೀರಿ. ರಾಜ್ಯದಲ್ಲಿ ನಯಟ್ ಕರ್ಫ್ಯೂ ಕೂಡ ಬೇಕಾಗಿಲ್ಲ ಎಂದರು.

ವಿದ್ಯುತ್, ಹಾಲಿನ ದರ ಏರಿಕೆಗೆ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್,  ಮೊದಲು ಜನರಿಗೆ ಆದಾಯದ ಮಾರ್ಗ ತೋರಿಸಲಿ ಆಮೇಲೆ ದರ ಏರಿಕೆ ಬಗ್ಗೆ ಚರ್ಚಿಸಲಿ ಎಂದು  ಹರಿಹಾಯ್ದರು.

Key words: government-DK Shivakumar -demands -night curfew