ಬೆರಳ ತುದಿಯಲ್ಲೇ ಸರಕಾರಿ ಕಾಲೇಜಿನ ಕೋರ್ಸ್‌ ವಿವರ

Promotion

ಬೆಂಗಳೂರು:ಮೇ-11: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್‌, ಪ್ರಾಧ್ಯಾಪಕರು, ತರಗತಿ ವೇಳಾಪಟ್ಟಿ ಹಾಗೂ ಸೌಲಭ್ಯಗಳ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಲೇಜಿನಿಂದ ಕಾಲೇಜಿಗೆ ಅಲೆದಾಡಬೇಕಿಲ್ಲ! ಎಲ್ಲ ಮಾಹಿತಿ ಬೆರಳ ತುದಿಯಲ್ಲೇ ಸಿಗಲಿದೆ.

2019-20ನೇ ಸಾಲಿಗೆ ಸರಕಾರಿ ಪದವಿ ಕಾಲೇಜಿನಲ್ಲಿ ದಾಖಲಾತಿ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲೇ ಎಲ್ಲ ಮಾಹಿತಿ ಲಭ್ಯ. ರಾಜ್ಯದ 412 ಸರಕಾರಿ ಕಾಲೇಜುಗಳು ವೆಬ್‌ಸೈಟ್ ಸಿದ್ಧಪಡಿಸಿದ್ದು, ಇಲಾಖೆಯ ಅಂತರ್ಜಾಲ ತಾಣದಲ್ಲಿ ಲಿಂಕ್‌ ದೊರೆಯಲಿದೆ. ವಿದ್ಯಾರ್ಥಿಗಳು ಸುಲಭವಾಗಿ ಆ ಲಿಂಕ್‌ ತೆರೆದು, ತಮಗೆ ಬೇಕಾದ ಸರಕಾರಿ ಪದವಿ ಕಾಲೇಜಿನ ಮಾಹಿತಿ ಪಡೆಯಬಹುದಾಗಿದೆ.

ಎಲ್ಲ ವಿವರ ಲಭ್ಯ
ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್‌ಗಳು, ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಸಂಪೂರ್ಣ ವಿವರ ವೇಳಾಪಟ್ಟಿ ಸಹಿತ ದೊರೆಯಲಿದೆ. ವೆಬ್‌ಸೈಟ್‌ನ ಸ್ಟೂಡೆಂಟ್ ಸಪೋರ್ಟ್‌ ವಿಭಾಗದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್‌, ರೇಂಜರ್‌, ರೋವರ್‌, ಮತ್ತು ಪ್ಲೇಸ್‌ಮೆಂಟ್ ಸೆಲ್ಗಳ ಮಾಹಿತಿ ಇದೆ.

ಆನ್‌ಲೈನ್‌ ಅರ್ಜಿ ಇಲ್ಲ
ಪದವಿ ಕಾಲೇಜಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ಅನುಕೂಲವಾಗುವ ವೆಬ್‌ಸೈಟ್ ಒಂದನ್ನು ಕಾಲೇಜು ಶಿಕ್ಷಣ ಇಲಾಖೆ ಅಭಿವೃದ್ಧಿಪಡಿಸುತ್ತಿದ್ದು, ಅದು ಪೂರ್ಣಗೊಳ್ಳದಿರುವುದರಿಂದ ಈ ಸಾಲಿನಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಎಲ್ಲ ಸರಕಾರಿ ಕಾಲೇಜುಗಳ ವೆಬ್‌ಸೈಟ್ ಬಳಕೆಗೆ ಸಿದ್ಧವಾಗಿದೆ. ವಿದ್ಯಾರ್ಥಿಗಳು, ಪೋಷಕರು ಕಾಲೇಜುಗಳ ಮಾಹಿತಿಯನ್ನು ಸುಲಭವಾಗಿ ಪಡೆದು, ಸರಕಾರಿ ಕಾಲೇಜಿಗೆ ದಾಖಲಾಗಬಹುದಾಗಿದೆ.
– ಪ್ರೊ| ಎಸ್‌. ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿ. ಇ
ಕೃಪೆ:ಉದಯವಾಣಿ

ಬೆರಳ ತುದಿಯಲ್ಲೇ ಸರಕಾರಿ ಕಾಲೇಜಿನ ಕೋರ್ಸ್‌ ವಿವರ
government-college-course-profile-at-finger-point