ರಾಜ್ಯವನ್ನ ಲೂಟಿ ಮಾಡಿವುದರಲ್ಲಿ ಸರ್ಕಾರ ನಿರತ- ಮಾಜಿ ಸಚಿವ ಅಶ್ವಥ್ ನಾರಾಯಣ್ ಕಿಡಿ.

Promotion

ಬೆಂಗಳೂರು,ಅಕ್ಟೋಬರ್,17,2023(www.justkannada.in): ರಾಜ್ಯವನ್ನ ಲೂಟಿ ಮಾಡಿವುದರಲ್ಲೇ ರಾಜ್ಯ ಸರ್ಕಾರ ನಿರತವಾಗಿದೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಕಿಡಿ ಕಾರಿದರು.

ಐಟಿ ದಾಳಿ ವೇಳೆ ಕೋಟ್ಯಾಂತರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಮಾತನಾಡಿದ ಅಶ್ವತ್ ನಾರಾಯಣ್,  ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ಯಡವಟ್ಟು ಮಾಡುತ್ತಾ ಬಂದಿದೆ. 34 ವರ್ಷದಲ್ಲಿ ಎಂದೂ ಕಾಣದ ಬಹುಮತವನ್ನ ರಾಜ್ಯದ ಜನ ಕೊಟ್ಟಿದ್ದಾರೆ. ಆದರೆ ಜನ ಆಶೀರ್ವಾದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯವನ್ನ ಲೂಟಿ ಮಾಡಿವುದಲ್ಲಿ ಸರ್ಕಾರ ಮುಳುಗಿದೆ. ಅಧಿಕಾರ ದಾಹದಿಂದ ಇಡೀ‌ ರಾಜ್ಯವನ್ನ ಲೂಟಿ ಮಾಡಲು ಹೊರಟಿದ್ದಾರೆ. ಎಲ್ಲ ಮಂತ್ರಿಗಳು ಈ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಗುಡುಗಿದರು.

ನಾವು ಯಾವುದಕ್ಕೂ ಹೆದರುವುದಿಲ್ಲ ಅಂತ ಬಂಡತನ ಪ್ರದರ್ಶಿಸುತ್ತಿದ್ದಾರೆ. ಹಣ ಕೊಟ್ಟರೆ ಸರ್ವೀಸ್ ಕೊಡುತ್ತೇವೆ ಅಂತ ಭಾಗ್ಯಗಳನ್ನ ಪಡೆಯಬೇಕಾಗಿದೆ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.

92 ಕೋಟಿ ಸಿಕ್ಕಿರುವುದು ಕೇವಲ ಮೇಲ್ನೋಟಕ್ಕೆ ಮಾತ್ರ.  ಸಿದ್ದರಾಮಯ್ಯ ಈ ಬಗ್ಗೆ ಉತ್ತರಿಸಲಿಲ್ಲ. ನಮಗೆ ಸಂಬಂಧವಿಲ್ಲ ಎಂದ್ರು. ಬಿಜೆಪಿ ಗುತ್ತಿಗೆದಾರರದ್ದು ಅಂದ್ರು. ಹಾಗಾದ್ರೆ ಸಿಬಿಐಗೆ ವಹಿಸಿ ಸ್ವಾಮಿ ಎಂದು ಅಶ್ವಥ್ ನಾರಾಯಣ್ ಆಗ್ರಹಿಸಿದರು.

Key words:  government – busy- looting – state – former minister -Ashwath Narayan