ಹದ್ದಗೆಟ್ಟ ರಸ್ತೆ, ಸಂಚರಿಸಲಾಗದೆ ಮಧ್ಯದಲ್ಲಿ ನಿಂದ ಸರ್ಕಾರಿ ಬಸ್: ಜನಪ್ರತಿನಿಧಿಗಳ ವಿರುದ್ದ ಆಕ್ರೋಶ…

Promotion

ಬೆಳಗಾವಿ,ಜು,4,2019(www.justkannada.in):  ರಸ್ತೆ ಹದಗೆಟ್ಟ ಹಿನ್ನೆಲೆ ಸರ್ಕಾರಿ ಬಸ್ ಸಂಚರಿಸಲಾಗದೆ ರಸ್ತೆ ಮಧ್ಯದಲ್ಲಿ ನಿಂತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದ ಈ ಘಟನೆ ನಡೆದಿದೆ. ಗಿರಿಯಾಲ ಮತ್ತು ಚಿಕ್ಕಬಾಗೇವಾಡಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಹದಗೆಟ್ಟ ರಸ್ತೆ ಮಳೆಗೆ ಇನ್ನೂಷ್ಟು ಹಾಳಾಗಿದೆ. ಈ ನಡುವೆ ಬಸ್ ನಡುರಸ್ತೆಯಲ್ಲಿ ಕೈಕೊಟ್ಟದಿಂದ  ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಬಸ್ ಪ್ರಯಾಣಿಕರು ಬೈಕ್ ಮೂಲಕ  ತಮ್ಮ ಊರು ತಲುಪಿದರು. ರಸ್ತೆ ಹದಗೆಟ್ಟಿರುವ ಹಿನ್ನೆಲೆ ರಸ್ತೆ ದುಯರಸ್ತಿ  ಮಾಡಿಸದ ಜನಪ್ರತಿನಿಧಿಗಳು ಗ್ರಾಮ ಪಂಚಾಯತಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Key words: Government bus – middle – road- Outrage- against –Representatives-belagavi