ಸರ್ಕಾರದ ರೈತ ವಿರೋಧಿ ನೀತಿಗಳಿಂದ ಅನ್ನದಾತರ ಬದುಕು ಶೋಚನೀಯ- ಕುರುಬೂರು ಶಾಂತಕುಮಾರ್ ಅಸಮಾಧಾನ…

Promotion

ಮೈಸೂರು,ಸೆಪ್ಟಂಬರ್,3,2020(www.justkannada.in):  ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ದೇಶದಲ್ಲೇ ರಾಜ್ಯಕ್ಕೆ ದ್ವಿತೀಯ ಸ್ಥಾನವಿದೆ. ಸರ್ಕಾರದ ರೈತ ವಿರೋಧಿ ನೀತಿಗಳಿಂದ ರೈತರ ಬದುಕು ಶೋಚನೀಯವಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ರೈತ ಮುಖಂಡ ಕುರುಬೂರು ಶಾಂತಕುಮಾರ್ , ನಮ್ಮ ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬರಗಾಲ ಅತಿವೃಷ್ಠಿಯಿಂದ ಸರಣಿ ಅನಾಹುತಕಾರಿ ಘಟನೆಗಳು ನಡೆಯುತ್ತಿದೆ. ರೈತರ ಬದುಕು ದಿನೇ ದಿನೇ ದುರ್ಬಲವಾಗುತ್ತಿದೆ. ಈ ಬಾರಿ ಕೊರೋನಾದಿಂದ ರೈತರು ಮತ್ತಷ್ಟು ನಲುಗುತ್ತಿದ್ದಾರೆ. ಇದರಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ರೈತರ ವಿಷಯದಲ್ಲಿ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದ ರೈತ ವಿರೋಧಿ ನೀತಿಗಳಿಂದ ರೈತರ ಬದುಕು ಶೋಚನೀಯವಾಗಿದೆ ಎಂದು ಕಿಡಿಕಾರಿದರು.

ಬೆಲೆ ನೀತಿ, ಮಾರುಕಟ್ಟೆ ನೀತಿ ಯಾವುದು ಸಮರ್ಪಕವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದೊಡ್ಡ ದೊಡ್ಡ ಉದ್ಯಮಿಗಳನ್ನು ಪೋಷಿಸುವ ಕೆಲಸ ಬಿಟ್ಟರೆ ರೈತರಿಗೆ ಬೇರೇನು ಮಾಡುತ್ತಿಲ್ಲ. ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಇವುಗಳೆಲ್ಲಾ ರೈತರಿಗೆ ಮರಣ ಶಾಸನವಾಗಿದೆ. ಇವುಗಳ ವಿರುದ್ದ ಈ ಬಾರಿ ಅಧಿವೇಶನದಲ್ಲಿ ದೊಟ್ಟಮಟ್ಟದ ಹೋರಾಟ ಮಾಡಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.government-anti-peasant-policies-farmer-leader-kurubur-shantakumar

ಸರ್ಕಾರಗಳ ವಿಶೇಷ ಪ್ಯಾಕೇಜ್ ಹಾಗೂ ಪರಿಹಾರಧನಗಳು ಪಾರದರ್ಶಕವಾಗಿ ರೈತರ ಕೈ ಸೇರುತ್ತಿಲ್ಲ ಎಂದು ಸರ್ಕಾರಗಳ ರೈತವಿರೋಧಿ ಧೋರಣೆಗಳ ಕುರಿತು ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದರು.

Key words:  government- anti-peasant -policies –Farmer -leader- Kurubur Shantakumar