ರಾಜ್ಯಾದ್ಯಂತ ಉದ್ಯಾನವನಗಳ ತೆರೆಯುವ ಅವಧಿಯನ್ನ ವಿಸ್ತರಿಸಿದ  ರಾಜ್ಯ ಸರ್ಕಾರ…

Promotion

ಬೆಂಗಳೂರು, ಜೂ,2020(www.justkannada.in):  ಕರೋನಾ ಮಹಾಮಾರಿ ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯಾದ್ಯಂತ ಉದ್ಯಾನವನಗಳನ್ನ ತೆರೆಯಲು ನೀಡಿದ್ದ ಅವಧಿಯನ್ನ ರಾಜ್ಯ ಸರ್ಕಾರ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ/ಪುರಸಭೆ ಉದ್ಯಾನವನಗಳನ್ನ ಬೆಳಿಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ತೆರೆಯಲು ಅವಧಿ ನಿಗದಿಪಡಿಸುವಂತೆ ಮಹಾನಗರ ಪಾಲಿಕೆಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.government- allowed - parks -open

ಈ ಹಿಂದೆ ಲಾಕ್ ಡೌನ್ ಸಡಿಲಿಕೆ ನಂತರ  ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿ  ರಾಜ್ಯಾದ್ಯಂತ ಪಾರ್ಕ್ ಗಳನ್ನ  ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಹಾಗೂ ಸಂಜೆ 4 ರಿಂದ 7 ಗಂಟೆವರೆಗೆ ಮಾತ್ರ ಸಾರ್ವಜನಿಕರಿಗೆ ತೆರೆಯಲು ಅವಕಾಶ ನೀಡಿತ್ತು.

ಜೂನ್ 30ರವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಕಂಟೈನ್ ಮೆಂಟ್ ಜೋನ್ ಹೊರತುಪಡಿಸಿದ ಪ್ರದೇಶಗಳಲ್ಲಿ ಹಂತ ಹಂತವಾಗಿ ನಿಷೇಧಿತ ಚಟುವಟಿಕೆಗಳನ್ನ ತೆರೆಯಲು ಕೇಂದ್ರ ಸರ್ಕಾರ  ಮಾರ್ಗಸೂಚಿ ಬಿಡುಗಡೆ ಮಾಡಿದೆ.

Key words: government- allowed – parks -open