ನಿಖಿಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್…

Promotion

ಬೆಂಗಳೂರು,ಸೆಪ್ಟಂಬರ್, 12,2020(www.justkannada.in): ಸ್ಯಾಂಡಲ್ ವುಡ್ ನಟ ನಿಖಲ್ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ಧಿ ನೀಡಿದ್ದಾರೆ. ನಿಖಿಲ್  ಅಭಿನಯದ ಮುಂದಿನ ಸಿನಿಮಾಕ್ಕೆ ರೈಡರ್ ಎಂದು ಟೈಟಲ್ ನೀಡಲಾಗಿದೆ. ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

ಲಹರಿ ಮ್ಯೂಸಿಕ್ ಟಿ ಸಿರೀಸ್‌ನಲ್ಲಿ ವಿಡಿಯೋ ಕಾಣಬಹುದು.  ಗೌತಮ್ ರಾಜ್ ಮೋಷನ್ ಪೋಸ್ಟರ್ ಕಾನ್ಸೆಪ್ಟ್ ಹಾಗೂ ಡಿಸೈನ್ ಮಾಡಿದ್ದಾರೆ.‌ ರಾಜನ್ ಸೌಂಡ್ ಎಫೆಕ್ಟ್ ನೀಡಿದ್ದಾರೆ.‌ ಅಶ್ವಿನ್ ರಮೇಶ್ ಪೋಸ್ಟರ್ ಡಿಸೈನ್ ಮಾಡಿದ್ದು, ನರಸಿಂಹ ಜಾಲಹಳ್ಳಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.Good news for Nikhil fans.