ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ!

Promotion

ಬೆಂಗಳೂರು, ಮೇ 07, 2023 (www.justkannada.in): ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ ಸಿಕ್ಕಿದೆ. 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಂದು ದೊಡ್ಡ ಅಪ್‍ಡೇಟ್‍ ಸಿಕ್ಕಿದೆ.

ಕೇಂದ್ರ ಸರ್ಕಾರ ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು ರಚಿಸಲಿದೆ. ಮುಂದಿನ ವರ್ಷ ಕೇಂದ್ರ ಉದ್ಯೋಗಿಗಳ ವೇತನವು ಶೇ.44ಕ್ಕಿಂತ ಹೆಚ್ಚಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

7ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶವು 2.57 ಪಟ್ಟು ಇತ್ತು, ನಂತರ ನೌಕರರ ವೇತನವು ಶೇ.14.29ರಷ್ಟು ಹೆಚ್ಚಾಗಿದೆ. ಅದೇ ರೀತಿ ಉದ್ಯೋಗಿಗಳ ಕನಿಷ್ಠ ವೇತನವನ್ನು ನೇರವಾಗಿ 18 ಸಾವಿರ ರೂ.ನಿಂದ 26 ಸಾವಿರ ರೂ.ಗೆ ಹೆಚ್ಚಿಸಬಹುದು.

ಪ್ರಸ್ತುತ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಮಂಡಿಸಿಲ್ಲ. ಮೂಲಗಳ ಪ್ರಕಾರ, ಸರ್ಕಾರವು 2024ರಲ್ಲಿ 8ನೇ ವೇತನ ಆಯೋಗವನ್ನು ಪರಿಚಯಿಸಬಹುದು ಮತ್ತು ಅದನ್ನು 2026ರಲ್ಲಿ ಜಾರಿಗೆ ತರಬಹುದು.