ಚಕ್ರವರ್ತಿಯಾಗದ ನಚ್ಚಿ : ಓರ್ವ ಉತ್ತಮ ವ್ಯಕ್ತಿ ಹಾಗೂ ಬರಹಗಾರ

Promotion

ಬೆಂಗಳೂರು,ಜನವರಿ,25,2022(www.justkannada.in): ಪತ್ರಕರ್ತರು ಜನರ ಬಗ್ಗೆ ಆಗಾಗ ಬರೆಯುತ್ತಲೇ ಇರುತ್ತಾರೆ. ಆದರೆ ಅರ್ಹರಾಗಿದ್ದರೂ ಸಹ ಇವರ ಸೇವೆ ಬೆಳಕಿಗೆ ಬರುವುದು ಬಹಳ ಅಪರೂಪ. ಆದರೆ ಈ ಪೈಕಿಯೂ ಕೆಲವರು ಬೆಳಕಿಗೆ ಬಂದಿದ್ದಾರೆ. ಅಂತಹವರಲ್ಲಿ ಮಂಡ್ಯಮ್ ನರಸಿಂಹ ಚಕ್ರವರ್ತಿ, ಅಥವಾ ಎಂ.ಎನ್. ಚಕ್ರವರ್ತಿ, ಅಕಾ ನಚ್ಚಿ ಒಬ್ಬರು. ತಮ್ಮ ೭೧ನೇ ವಯಸ್ಸಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಇವರು ದೈವಾದೀನರಾದರು. ಆದರೆ ಜನರಿಗೆ ಅನೇಕ ಮೆಚ್ಚಿನ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಚಕ್ರವರ್ತಿ ಅವರು ಲಂಕೇಶ್ ಪತ್ರಿಕೆ, ಇಂಡಿಯನ್ ಎಕ್ಸ್ಪ್ರೆಸ್, ನ್ಯೂಸ್ ಟೈಂ, ಹಾಗೂ ಡೆಕ್ಕನ್ ಕ್ರಾನಿಕಲ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಓರ್ವ ಸಮಗ್ರತೆ, ತತ್ವ ಸಿದ್ಧಾಂತಿ, ಜಾಣತನ, ಹಾಸ್ಯ ಹಾಗೂ ಬುದ್ಧವಂತಿಕೆಯ ಗುಣಗಳಿದ್ದಂತಹ ಪತ್ರಕರ್ತರಾಗಿದ್ದರು. ಬಹುಶಃ ಅವರ ಪದಕೋಶದಲ್ಲಿ “ಅಸೂಯೆ” ಎಂಬ ಪದಕ್ಕೆ ಸ್ಥಳವೇ ಇರಲಿಲ್ಲ ಅನಿಸುತ್ತದೆ.
ಅವರ ಮೊದಲ ಜಯಂತಿಯ ಸ್ಮರಣೆಯಾಗಿ, ಹಲವು ಪತ್ರಕರ್ತರು ಸೇರಿ ರಚಿಸಿಕೊಂಡಿರುವ “ನಚ್ಚಿ ಬಳಗ”ಎಂಬ ಗೆಳೆಯರ ಕೂಟದ ವತಿಯಿಂದ ಅವರ ಜೀವನಚರಿತ್ರೆ ಹಾಗೂ ವೃತ್ತಿಗೆ ಸಂಬಂಧಿಸಿದ ಒಂದು ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ. “ಚಕ್ರವರ್ತಿಯಾಗದ ನಚ್ಚಿ,” ಎಂಬ ಶೀರ್ಷಿಕೆಯುಳ್ಳ, ಉತ್ತಮ ರೇಖಾಚಿತ್ರಗಳು, ಛಾಯಾಚಿತ್ರಗಳು ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲೇಖನಗಳಿರುವ ಪುಸ್ತಕವಾಗಿದೆ. ಈ ಪೈಕಿ ಒಂದು ಲೇಖವನ್ನು ನಾನು ಬರೆದಿದ್ದೇನೆ. ಮಾಧ್ಯಮ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಎನ್.ಕೆ. ಮೋಹನ್ ರಾಮ್ ಹಾಗೂ ವಿಜಯ್ ಭಟ್ ಅವರು ಈ ಪುಸ್ತಕವನ್ನು ಸಂಪಾದಿಸಿದ್ದಾರೆ. ೨೨೮ ಪುಟಗಳಿರುವ ಈ ಪುಸ್ತಕವನ್ನು ಚಾರುಮತಿ ಪ್ರಕಾಶನ (೯೪೪೮೨-೩೫೫೩೩) ಪ್ರಕಟಿಸಿದ್ದು, ರೂ.೩೦೦ ದರ ನಿಗಧಿಪಡಿಸಿದೆ. ಈ ಪುಸ್ತಕವನ್ನು ಜನವರಿ ೨೬ರಂದು ಶೇಷಾದ್ರಿಪುರಂನ ಗಾಂಧಿ ಭವನದಲ್ಲಿ ಸಂಜೆ ೫ ರಿಂದ ೭ ಗಂಟೆಯ ನಡುವೆ ಔಪಚಾರಿಕವಾಗಿ ಬಿಡುಗಡೆಗೊಳಿಸಲಾಗುವುದು.
ನಚ್ಚಿ ನನ್ನ ಆತ್ಮೀಯರು ಹಾಗೂ ಮೆಚ್ಚಿನ ಪತ್ರಕರ್ತರ ಪೈಕಿ ಒಬ್ಬರಾಗಿದ್ದರು. ಆತ ಓರ್ವ ವಿಷಯ ಬರಹಗಾರನಷ್ಟೇ ಆಗಿರಲಿಲ್ಲ, ಬದಲಿಗೆ ನಿಜವಾದ ಪತ್ರಕರ್ತರಾಗಿದ್ದರು. ಆತ ನನಗೆ ತನ್ನದೇ ಆದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಅದು ಹೆಚ್ಚು ಆಪ್ತಸಮಾಲೋಚನೆಯಂತಿರುತಿತ್ತು. ಅವರ ಅನುಭವಗಳನ್ನು ವಿವರಿಸುವಲ್ಲಿ ನಿಷ್ಣಾತರಾಗಿದ್ದರು. ತೀಕ್ಷ್ಣ ನೆನಪಿನ ಶಕ್ತಿಯಿತ್ತು. ನಡೆದಿರುವ ಘಟನೆಗಳು, ಅಭಿಪ್ರಾಯಗಳು ಹಾಗೂ ಜನರ ನಡವಳಿಕೆಯ ವಿವರಗಳನ್ನು ಬಹಳ ಸುಲಭವಾಗಿ ನೆನಪು ಮಾಡಿಕೊಳ್ಳುತ್ತಿದ್ದರು ಮತ್ತು ತಮ್ಮ ಅವಲೋಕನಗಳನ್ನು ಮಂಡಿಸುತ್ತಿದ್ದರು. ಪತ್ರಿಕಾಗೋಷ್ಠಿಗಳು ಅಥವಾ ರಾಜಕಾರಣಿಗಳ ಸಾರ್ವಜನಿಕ ಜಾಥಾಗಳಿಗೆ ಹೋದಾಗ ಬಹಳ ಸಮಯದವರೆಗೂ ಕಾಯಬೇಕಾಗುತ್ತದೆ. ಅಂತಹ ಸಮಯದಲ್ಲಿ ಯಾವ ರೀತಿ ತಾಳ್ಮೆಯಿಂದಿರಬೇಕು ಎನ್ನುವ ಬಗ್ಗೆ ನನಗೆ ಅನೇಕ ಚುಟುಕು ಸಲಹೆಗಳನ್ನು ನೀಡುತ್ತಿದ್ದರು. ದುರಾದೃಷ್ಟವಶಾತ್ ಅವರು ತಮ್ಮ ನೆನಪುಗಳು ಅಥವಾ ಅನುಭವಗಳನ್ನು ಬರೆದಿಟ್ಟಿಲ್ಲ.
ಆದರೆ ಈ ಪುಸ್ತಕ ಆ ಕೆಲಸವನ್ನು ಬಹಳ ಮಟ್ಟಿಗೆ ಮಾಡಿದೆ. ಅವರ ಮಡದಿ ರಾಜಲಕ್ಷ್ಮಿ ಅವರು ನಚ್ಚಿ ಅವರ ಆಧ್ಯಾತ್ಮಿಕ ಜೀವನದ ಕುರಿತು ಸ್ವಲ್ಪ ಮಾಹಿತಿಯನ್ನು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯವಾಹಿನಿ ಪತ್ರಿಕೋದ್ಯಮಕ್ಕೆ ಪ್ರವೇಶಿಸುವ ಮುಂಚೆ ಅವರು ಕೆಲವು ವರ್ಷಗಳವರೆಗೆ ಮಹರ್ಷಿ ಮಹೇಶ್ ಯೋಗಿ ಸಂಸ್ಥೆಯ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು ಎಂಬ ವಿಷಯವನ್ನು ಕೇಳಿದರೆ ಆಶ್ಚರ್ಯವಾಗುತ್ತದೆ.
ಈ ಪುಸ್ತಕ ಪ್ರಸ್ತುತ ಬರಿ ನೆನಪಾಗಿ ಉಳಿದಿರುವ ಆ ವ್ಯಕ್ತಿಯನ್ನು ಪತ್ರಕರ್ತನನ್ನಾಗಿ ವೈಭವೀಕರಿಸುವುದಿಲ್ಲ. ಬದಲಿಗೆ ಅದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ಹೊಂದಿದೆ. ಓರ್ವ ಅನುಭವಿ ಪತ್ರಕರ್ತನ ಅನೇಕ ಮುಖಗಳನ್ನು ಪರಿಚಯಿಸುತ್ತದೆ. ಅವರ ಬಗ್ಗೆ ಗೊತ್ತಿಲ್ಲದಿರುವ, ಆದರೆ ಮಾಧ್ಯಮದಲ್ಲಿ ಆಸಕ್ತಿಯಿರುವಂತಹವರು ಈ ಪುಸ್ತಕವನ್ನು ಓದಬಹುದು. ನಚ್ಚಿ ಬದುಕಿದ್ದಾಗ ಈ ಪುಸ್ತಕವನ್ನು ಅವರಿಗೆ ಉಡುಗೊರೆಯಾಗಿ ನೀಡಿದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗನಿಸುತ್ತದೆ.

ಕೃಪೆ: ಫೇಸ್ ಬುಕ್

ಆಶಾ ಕೃಷ್ಣಸ್ವಾಮಿ

key words: good human -being – good documentation.