ಮಂಗಳೂರಿನಲ್ಲಿ ಗೋಲಿಬಾರ್ ವಿಚಾರ: ಸಾಕ್ಷ್ಯ ತೋರಿಸಲು ಕಲ್ಲು ತೂರಾಟದ ದೃಶ್ಯ ಬಿಡುಗಡೆ ಮಾಡಿದ ಪೊಲೀಸರು….

Promotion

ಮಂಗಳೂರು,ಡಿ,24,2019(www.justkannada.in):  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದ ವೇಳೆ ಪೊಲೀಸರ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಸಿ.ಸಿ ಟಿವಿ ದೃಶ್ಯಾವಳಿಯನ್ನ ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿರಲಿಲ್ಲ ಎಂದು ರಾಜಕೀಯ ನಾಯಕರು ಹೇಳಿಕೆ ನೀಡಿರುವ ಹಿನ್ನಲೆ ಕಲ್ಲು ತೂರಾಟ  ನಡೆಸಿದ್ದಕ್ಕೆ ಸಾಕ್ಷ್ಯ ತೋರಿಸಲು ಮಂಗಳೂರು ಪೊಲೀಸರು ಸಿ.ಸಿ ಟಿವಿ ದೃಶ್ಯ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕಲ್ಲು ತೂರಾಟ ನಡೆದಿರುವುದು ಕಂಡು ಬಂದಿದೆ.

ಕಲ್ಲು ತೂರಾಟ ನಡೆಸಲು ಕಿಡಿಗೇಡಿಗಳು ಆಟೋದಲ್ಲಿ ಕಲ್ಲುಗಳನ್ನ ತಂದಿರುವ ದೃಶ್ಯ ಪೊಲೀಸ್ ವಾಹನಕ್ಕೆ ಅಡ್ಡಹಾಕಿದ್ದ ದೃಶ್ಯಗಳು ಕಂಡು ಬಂದಿವೆ. ಕೆಲ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆsಸಿದ್ದು, ಬಳಿಕ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದು, ಈ ಎಲ್ಲಾ ಘಟನೆಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ. ಮನೆಗಳ ಮುಂದಿದ್ದ ಕ್ಯಾಮೆರಾಗಳನ್ನು ತಿರುಗಿಸಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಪ್ರತಿಭಟನೆ ವೇಳೆ  ಕಲ್ಲು ತೂರಾಟ ನಡೆಸಿದ ಹಿನ್ನೆಲೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ  ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡು ತಗುಲಿ ಇಬ್ಬರು ಮೃತಪಟ್ಟಿದ್ದರು.

Key words: Golibar -issue –Mangalore-Police- released – stone-piercing- scene