ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಅನಿಸುತ್ತಿದೆ- ಸಚಿವ ಸ್ಥಾನ ಸಿಗದಿದ್ದಕ್ಕೆ ಗೂಳಿಹಟ್ಟಿ ಶೇಖರ್ ಅಸಮಾಧಾನ…..

ಬೆಂಗಳೂರು,ಆ,20,2019(www.justkannada.in):  ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೆ ಅಸಮಾಧಾನ ಸ್ಪೋಟಗೊಂಡಿದ್ದು ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಗೂಳಿಹಟ್ಟಿ ಶೇಖರ್ , ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಅನಿಸುತ್ತೆ. ಅದಕ್ಕೆ ತಕ್ಕ ಶಿಕ್ಷೆಯಾಗಿದೆ. ಮುಲಾಜಿಗೆ ಬಿದ್ದು ನಾಶವಾದೆ ಎಂದು ಹೇಳಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಪಕ್ಷೇತರ ಶಾಸಕನಾಗಿ ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದಾವ ನಾನು. ಈಗ ಆ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದ್ದನ್ನೇ ಬಿಜೆಪಿಯವರು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ. ನಾನು 2008 ರಲ್ಲಿ ಬಿಟ್ಟಿಯಾಗಿ ಮುಖ್ಯಮಂತ್ರಿ ಮಾಡಲು, ಸರ್ಕಾರ ಬರಲು ನಾನು ಬೆಂಬಲ ಕೊಟ್ಟಿರಲಿಲ್ಲವೇ ಎಂದು ಪ್ರಶ್ನಿಸಿದರು.

2008ರಲ್ಲಿ ಬಿಜೆಪಿ ಸರ್ಕಾರದಿಂದ ನನಗೆ ಅನ್ಯಾಯವಾಗಿತ್ತು. ಅದನ್ನ ಸರಿಪಡಿಸಿ ಎಂದು ಸಿಎಂ ಬಿಎಸ್ ವೈ, ಆರ್ ಅಶೋಕ್ ಬಳಿ ಮನವಿ ಮಾಡಿದ್ದೆ. ನನಗೆ ಹೈಕಮಾಂಡ್ ಯಾವುದು ಗೊತ್ತಿಲ್ಲ. ಆದರೆ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ ಪೇದೆಗಳು ಸಹ ನಮ್ಮ ಮಾತು ಕೇಳಲ್ಲ. ನಾವು ಎಲ್ಲಾ ರೀತಿಯ ನೋವು ಅನುಭವಿಸಿದ್ದೇವೆ. ನಾನು ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಅನ್ನಿಸುತ್ತಿದೆ ಎಂದು ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ.

ನನ್ನ ಬಗ್ಗೆ ಹೆಜ್ಜೆ ಹೆಜ್ಜೆಗೆ ಅನುಮಾನಪಟ್ಟರು, ತೀವ್ರ ಹಿಂಸೆ, ಮಾನಸಿಕ ವೇದನೆ ನೀಡಿದರು. ರೆಸಾರ್ಟ್‌ ನಲ್ಲಿ ನನ್ನ ಮೊಬೈಲ್ ಫೋನ್ ಇನ್ ಕಾಮಿಂಗ್ ಬ್ಲಾಕ್ ಮಾಡಿಸಿದ್ದರು. ಇವರು ಮುಂದೆಯೂ ನನಗೆ ಮಂತ್ರಿ ಮಾಡುವು ನಂಬಿಕೆಯಿಲ್ಲ. ನನಗೆ ಹೈಕಮಾಂಡ್ ನಲ್ಲಿ ಯಾರದ್ದೂ ಪರಿಚಯ ಇಲ್ಲ. ಯಡಿಯೂರಪ್ಪ ಅವರನ್ನು ನಂಬಿ ಹೋಗಿದ್ದೆ. ನನಗೆ ನೋವಾಗಿದೆ. ರಾಜಕೀಯವೇ ಬೇಡ ಅನಿಸಿದೆ ಎಂದರು.

Key words: Going – BJP- seems- wrong-MLA-gulihatti Shekhar – upset -not – minister