ಸೂರಿಲ್ಲದ ಶಿಕ್ಷಕರಿಗೆ ಮುಡಾದಿಂದ ನಿವೇಶನ ನೀಡಿ: ಸುಧಾಕರ ಶೆಟ್ಟಿ ಮನವಿ

Promotion

ಮೈಸೂರು, ಅಕ್ಟೋಬರ್ 09, 2020 (www.justkannada.in): ಮುಡಾದಿಂದ ಗ್ರೂಪ್ ಹೌಸಿಂಗ್ ಸ್ಕೀಮ್‍ನಲ್ಲಿ ಶಿಕ್ಷಕರಿಗೆ ನಿವೇಶನ ನೀಡುವಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಯ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ ಮನವಿ ಮಾಡಿದ್ದಾರೆ.

ಈ ಸಂಬಂಧ ಮೈಸೂರು ನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ರಾಜೀವ್ ಅವರಿಗೆ ಪತ್ರ ಬರೆದಿರುವ ಸುಧಾಕರ ಶೆಟ್ಟಿ ನಿವೇಶನ ನೀಡಲು ಕೋರಿದ್ದಾರೆ.

ಮೈಸೂರು ನಗರದಲ್ಲಿ ನೆಲೆಸಿರುವ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸಾವಿರಾರು ಶಿಕ್ಷಕರುಗಳು ಮನೆಯಿಲ್ಲದೆ ಪಿ.ಜಿ ಗಳಲ್ಲಿ ವಾಸ ಮಾಡಿಕೊಂಡಿದ್ದಾರೆ. ಅವರಿಗೆ ಸೂರಿನ ಅವಶ್ಯಕತೆಯಿದ್ದು, ಅಂತಹ ಶಿಕ್ಷಕರಿಗೆ ನಗರಾಭಿವೃದ್ಧಿ ಮಂಡಳಿಯಿಂದ ಗ್ರೂಪ್ ಹೌಸಿಂಗ್ ಸ್ಕೀಮ್‍ನಲ್ಲಿ ಮಂಜೂರು ಮಾಡಬೇಕಾಗಿ ಮನವಿ ಮಾಡಿದ್ದಾರೆ.