ಮೈಶುಗರ್ ಸಕ್ಕರೆ ಕಾರ್ಖಾನೆ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟು ಅಭಿಯಾನ ಪ್ರಾರಂಭಿಸಿ: ಮಂಡ್ಯ ಜಿಲ್ಲಾ ರೈತರಿಗೆ ಕರೆ……

Promotion

ಮಂಡ್ಯ,ಅಕ್ಟೋಬರ್,23,2020(www.justkannada.in): ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯು ಕಳೆದ ವರ್ಷವು ಕಬ್ಬು ಅರೆಯಲಿಲ್ಲ. ಈ ವರ್ಷವು ಅರೆಯಲಿಲ್ಲ. ಮುಂದಿನ ವರ್ಷ…? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿರುವುದು ಪ್ರತಿಯೊಬ್ಬ ಜಿಲ್ಲಾ ಕಬ್ಬು ಬೆಳೆಗಾರರ ಹಕ್ಕು. ಈ ಬಗ್ಗೆ ರೈತರು ಈಗಲೇ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒಂದು “ಡೆಡ್ ಲೈನ್ ” ( ಗಡುವು) ನೀಡಿ ಅಭಿಯಾನ ಪ್ರಾರಂಭಿಸಿ ಎಂದು ಮಂಡ್ಯ ಜಿಲ್ಲಾ ಸಾಮಾನ್ಯ ರೈತ ರತ್ನಜ ಹನಕೆರೆ ಎಂಬುವವರು ಜಿಲ್ಲೆಯ ಕಬ್ಬುಬೆಳೆಗಾರರಿಗೆ ಕರೆ ನೀಡಿದ್ದಾರೆ.jk-logo-justkannada-logo

ನಿರ್ದಿಷ್ಟ ದಿನಾಂಕದೊಳಗೆ ಮೈಶುಗರ್ ಆರಂಭಕ್ಕಾಗಿ ಸರ್ಕಾರಕ್ಕೆ ಡೆಡ್ ಲೈನ್ (ಗಡುವು) ಕೊಟ್ಟು ಅಭಿಯಾನ ಪ್ರಾರಂಭಿಸಿ. ಇಲ್ಲವೆ ನಿಮ್ಮ ಬೆಳೆಗೆ ಬೆಂಕಿ ಹಾಕಲು ಸಿದ್ಧರಾಗಿ ಎಂದು ರತ್ನಜ ಹನಕೆರೆ ಕರೆ ನೀಡಿದ್ದಾರೆ.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ” ಎಂಬ ಮನಸ್ಥಿತಿಯ ಸ್ವಘೋಷಿತ ರೈತ ನಾಯಕರು, “ಬಿಸೋ ದೊಣ್ಣೆ” ತಪ್ಪಿಸಿಕೊಂಡು ತಲೆಮರೆಸಿಕೊಳ್ಳುವ ಚಾಣಾಕ್ಷ ಜನಪ್ರತಿನಿಧಿಗಳು, “ಜಾಣಕಿವುಡು- ಜಾಣಕುರುಡು” ಪ್ರದರ್ಶಿಸುವ ಸರ್ಕಾರ, ಇವರ ನಡುವೆ ಕೊನೆ ಕ್ಷಣದಲ್ಲಿ “ಇಂಗು ತಿಂದ ಮಂಗ”ನಂತಾಗುವ ಕಬ್ಬು ಬೆಳೆಗಾರರು..?give-deadline-government-start-campaign-mysugar-factory-mandya-farmer

ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯು ಕಳೆದ ವರ್ಷವು ಕಬ್ಬು ಅರೆಯಲಿಲ್ಲ. ಈ ವರ್ಷವು ಅರೆಯಲಿಲ್ಲ. ಮುಂದಿನ ವರ್ಷ..? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿರುವುದು ಪ್ರತಿಯೊಬ್ಬ ಜಿಲ್ಲಾ ಕಬ್ಬು ಬೆಳೆಗಾರರ ಹಕ್ಕು. ಈ ಬಗ್ಗೆ ರೈತರು ಈಗಲೇ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಒಂದು “ಡೆಡ್ ಲೈನ್ ” ( ಗಡುವು) ನೀಡಿ ಅಭಿಯಾನ ಪ್ರಾರಂಭಿಸಿ.( ಇದಕ್ಕೆ ಮಾಧ್ಯಮದವರ ನೆರವು ಪಡೆದುಕೊಳ್ಳಲು ಮರೆಯಬೇಡಿ)ಗಡುವು ದಿನಾಂಕದೊಳಗೆ ನಿರ್ಧಾರ ಕೈಗೊಳ್ಳದಿದ್ದರೆ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡಲು ಸಿದ್ಧರಾಗಿ ಎಂದು ರತ್ನಜ ಹನಕೆರೆ ತಿಳಿಸಿದ್ದಾರೆ.

ಈ ಬಾರಿ ಕಾರ್ಖಾನೆ ಪುನಾರಂಭವಾಗದಿದ್ದರೆ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆಗುವ ತೊಂದರೆ ತೀವ್ರವಾದದ್ದು.‌ ಏಕೆಂದರೆ ಹಿಂದೆಂದಿಗಿಂತಲೂ ಈ ಬಾರಿ ಮಂಡ್ಯ ಜಿಲ್ಲೆಯ ಅತಿ ಹೆಚ್ಚು ಪ್ರದೇಶದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲೋ , ಖಾಸಗಿ ಒಡೆತನದಲ್ಲೊ ಅಥವಾ ಓ ಅಂಡ್ ಎಂ ಪದ್ಧತಿಯಲ್ಲೋ, ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಕಾರ್ಖಾನೆ ಪ್ರಾರಂಭಿಸಲು ಈಗಲೇ ನಿರ್ಧರಿಸಿದರೆ ಒಳ್ಳೆಯದು. ಜಿಲ್ಲಾ ಯುವ ಕಬ್ಬು ಬೆಳೆಗಾರರೆ ಮುಂಚೂಣಿಗೆ ಬನ್ನಿ. ಸ್ವಘೋಷಿತ ರೈತನಾಯಕರನ್ನು ನಂಬಬೇಡಿ. ಅಭಿಯಾನಕ್ಕೆ – ಪ್ರತಿಭಟನೆಗೆ ಸಿದ್ಧರಾಗಿ ಎಂದು ರತ್ನಜ ಹನಕೆರೆ ಹೇಳಿದ್ದಾರೆ.

Key words: Give – deadline – government -start – campaign –mysugar factory- mandya- farmer