ನಂಜನಗೂಡು: ಶಾಲಾ ವಾರ್ಷಿಕೋತ್ಸವಕ್ಕೆ ತೆರಲುತ್ತಿದ್ದ ಬಾಲಕಿ ಕಾಡಿದ ದುರ್ವಿಧಿ

Promotion

ಮೈಸೂರು, ಫೆಬ್ರವರಿ 08, 2020 (www.justkannada.in): ಶಾಲಾ ವಾರ್ಷಿಕೋತ್ಸವಕ್ಕೆ ತೆರಳುತ್ತಿದ್ದ ಬಾಲಕಿ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ಬೈಕಿನಲ್ಲಿ ಮಾವನೊಂದಿಗೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕಿನ ಮಲ್ಕುಂಡಿ ಸಮೀಪದ ಎಂ.ಕೊಂಗಳ್ಳಿ ಬಳಿ ಶುಕ್ರವಾರ ನಡೆದಿದೆ.

ಮೃತ ಬಾಲಕಿಯನ್ನು ಯಡಹಳ್ಳಿ ಗ್ರಾಮದ ಗಿರೀಶ್ ಎಂಬವರ ಪುತ್ರಿ ಗಾನವಿ (6) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕಿಯ ತಾಯಿ ಪುಟ್ಟಿ, ಮಾವ ಮಲ್ಲಹಳ್ಳಿ ಗ್ರಾಮದ ಮಹೇಂದ್ರ, ತಂಗಿ ಪಾವನಿ (4) ಗಾಯಗೊಂಡಿದ್ದಾರೆ.