ಸಹಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಹೆಚ್.ಡಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಹರೀಶ್ ಗೌಡ…

Promotion

ಮೈಸೂರು,ಫೆಬ್ರವರಿ,4,2021(www.justkannada.in): ಕೆ ಆರ್ ನಗರ ಸಹಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿರುವುದಕ್ಕೆ ಜಿ ಡಿ ಹರೀಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.jk

ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಅದು ಸರ್ಕಾರಿ ಕಾರ್ಯಕ್ರಮ ಅಲ್ಲ. ಅದು ನಮ್ಮ ಸಹಕಾರಿಗಳು ಸೇರಿ ಆಯೋಜಿಸಿದ್ದ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಒಂದು ರೂಪಾಯಿ ಸರ್ಕಾರದ ದುಡ್ಡಿಲ್ಲ. ಎಲ್ಲವನ್ನ ನಮ್ಮ ಸಹಕಾರಿಗಳೇ ಸೇರಿ ಮಾಡಿದ್ದು. ಅಲ್ಲಿ‌ ಯಾವ ಜನಪ್ರತಿನಿಧಿಗಳಿಗೂ ಆಹ್ವಾನ ನೀಡಿರಲಿಲ್ಲ ಶ್ರೀಕಂಠಯ್ಯ ವೈಯಕ್ತಿಕವಾಗಿ ನನಗೆ ಅಭಿನಂದನೆ ಸಲ್ಲಿಸಿದರು ಅಷ್ಟೇ. ಅಲ್ಲಿ ಯಾರಿಗೂ ಆಹ್ವಾನ ಮಾಡಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. GD Harish Gowda -clarifies –HD kumaraswamy- allegations -violation - cooperative program.

ಅದು ಸರ್ಕಾರಿ ಕಾರ್ಯಕ್ರಮ ಅಲ್ಲ. ಅದು ಅಭಿನಂದನಾ ಸಮಾರಂಭ ಎಂದು ಮೈಸೂರಿನಲ್ಲಿ ಜಿ ಡಿ ಹರೀಶ್ ಗೌಡ ಹೇಳಿದರು.

Key words: GD Harish Gowda -clarifies –HD kumaraswamy- allegations -violation – cooperative program.