ಮತ್ತೆ ಟೀಂ ಇಂಡಿಯಾಗೆ ಗ್ಯಾರಿ ಕಸ್ಟರ್ನ್ ಕೋಚ್ ?

Promotion

ಮುಂಬೈ, ಮೇ 30, 2020 (www.justkannada.in): ದ.ಆಫ್ರಿಕಾ ಮೂಲದ ಗ್ಯಾರಿ ಕಸ್ಟರ್ನ್ ಮತ್ತೆ ಭಾರತ ತಂಡದ ಕೋಚ್ ಆಗಲಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಮೇ 2022 ರ ವೇಳೆಗೆ ಹಾಲಿ ಕೋಚ್ ರವಿಶಾಸ್ತ್ರಿಗೆ 60 ವರ್ಷ ತುಂಬಲಿದೆ. ನಿಯಮಗಳ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟವರು ಕೋಚ್ ಆಗುವಂತಿಲ್ಲ. ಹೀಗಾಗಿ ಶಾಸ್ತ್ರಿ ಅವಧಿ ಕೊನೆಗೊಳ್ಳಲಿದೆ.

ಅದಾದ ಬಳಿಕ ಮತ್ತೆ ಕಸ್ಟರ್ನ್ ಕೋಚಿಂಗ್ ಗೆ ಮರಳಿದರೂ ಅಚ್ಚರಿಯಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಸ್ಟರ್ನ್ ಗೆ ಈ ಪ್ರಶ್ನೆ ಕೇಳಿದಾಗ ಸ್ವತಃ ಅವರೂ ಆಸಕ್ತಿ ಹೊಂದಿರುವುದಾಗಿ ಹೇಳಿದ್ದರು.