ಗಾಂಜಾ ದಂಧೆಕೋರರಿಂದ ಪೊಲೀಸರ ಮೇಲೆ ಹಲ್ಲೆ: ಸಿಪಿಐ ಸ್ಥಿತಿ ಗಂಭೀರ.

Promotion

ಕಲಬುರಗಿ,ಸೆಪ್ಟಂಬರ್,24,2022(www.justkannada.in):  ಗಾಂಜಾ ದಂಧೆಕೋರರನ್ನ ಬೇಧಿಸಲು ಹೋದ ಪೊಲೀಸರ ಮೇಲೆಯೇ ದಂಧೆಕೋರರು ಹಲ್ಲೆ ನಡೆಸಿರುವ ಘಟನೆ ನಡೆಸಿದ್ದು ಸಿಪಿಐ ಗಂಭೀರ ಗಾಯಗೊಂಡಿದ್ದಾರೆ.

ಕಲಬುರಗಿ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸಿಪಿಐ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಗಂಭೀರವಾಗಿದ್ದು,  ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಂಜಾ ಮಾರಾಟಗಾರ ಸಂತೋಷ್​ನನ್ನು ಎರಡು ದಿನದ ಹಿಂದೆ ಪೊಲೀಸರು ಬಂಧಿಸಿದ್ದರು. ಆರೋಪಿಯ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಸಿಪಿಐ  ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ತೆರಳಿದ್ದರು.

ಈ ನಡುವೆ ರಾತ್ರಿ  ಹೊಲದಲ್ಲೆ ಗಾಂಜಾ ದಂಧೆಕೋರರ ಮೇಲೆ ದಾಳಿ ಮಾಡಲು ಮುಂದಾದಾಗ 40 ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕಲ್ಬುರ್ಗಿ ಎಸ್​​ಪಿ ಇಶಾ ಪಂತ್ ಭೇಟಿ ನೀಡಿ  ಆರೋಗ್ಯ ವಿಚಾರಿಸಿದ್ದಾರೆ.

Key words: ganja peddlers- attacked- Police -CPI –condition- critical