ವರ್ಷದಲ್ಲಿ ಗಂಗೂಬಾಯಿ ಸಂಗೀತ ವಿವಿ ಪುನಶ್ಚೇತನ: ಸಚಿವ ಅಶ್ವತ್ ನಾರಾಯಣ್

kannada t-shirts

ಬೆಂಗಳೂರು,ಡಿಸೆಂಬರ್13,2021(www.justkannada.in):  ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯವನ್ನು ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಹೇಳಿದ್ದಾರೆ.

ನಗರದ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ 51ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ವ್ಯಕ್ತಿಗಳು ನೆಮ್ಮದಿಯಿಂದ ಬದುಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಬಹಳ ಮುಖ್ಯ ಎಂದರು.

ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕೃತಿಯ ಇತರ ಅಂಶಗಳೆಲ್ಲವೂ ಇರಬೇಕೆನ್ನುವುದು ಸದಾಶಯವಾಗಿದೆ. ಏಕೆಂದರೆ, ಕೇವಲ ಶಾಲಾಕಾಲೇಜುಗಳ ಓದಷ್ಟೇ ಮುಖ್ಯವಲ್ಲ. ಇದನ್ನು ಮನಗಂಡೇ ಪ್ರಧಾನಿ ನರೇಂದ್ರ ಮೋದಿಯವರು ಸಮಗ್ರ ವಿಕಸನದ ಕಲ್ಪನೆ ಇರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ನುಡಿದರು.

ಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಸರಕಾರವು ಪರಿಪೂರ್ಣವಾಗಿ ಕಲಿಸಲಾರದು. ಇದರಲ್ಲಿ ಸಂಘಸಂಸ್ಥೆಗಳು ನಿರ್ವಹಿಸಬೇಕಾದ ಪಾತ್ರ ಮಹತ್ತರವಾದುದಾಗಿದೆ. ಈ ನಿಟ್ಟಿನಲ್ಲಿ ಗಾಯನ ಸಮಾಜದಂತಹ ಸಂಸ್ಥೆಗಳು ಮಾಡುತ್ತಿರುವ ಕೆಲಸವು ಅನುಸರಣ ಯೋಗ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ಕಲಾವಿದರು ಆರ್ಥಿಕವಾಗಿಯೂ ಸದೃಢವಾಗಿರಬೇಕು. ಇದಕ್ಕೆ ಪೂರಕವಾಗಿ ಓಓಟಿ ತರಹದ ಆಧುನಿಕ ತಂತ್ರಜ್ಞಾನ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀನಾರಾಯಣ ಜೀಯರ್, ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿ, ಸಂಗೀತ ವಿದ್ವಾಂಸರಾದ ಸೂರ್ಯಪ್ರಕಾಶ್, ಎ.ವಿ.ಆನಂದ್, ಗಾಯನ ಸಮಾಜದ ಮುಖ್ಯಸ್ಥರಾದ ಎಂ.ಆರ್.ವಿ ಪ್ರಸಾದ್ ಮತ್ತು ಉಪಾಧ್ಯಕ್ಷ ಅಚ್ಯುತ ಪದಕಿ ಮುಂತಾದವರು ಉಪಸ್ಥಿತರಿದ್ದರು.

Key words: Ganguobai  Music university- year-Minister- Ashwath Narayan

ENGLISH SUMMARY…

Gangubai Hanagal Music University will be revived in an year: Minister Ashwathnarayana

Bengaluru, December 13, 2021 (www.justkannada.in): “The Gangubai Music University in Mysuru will be revived according to global levels within a year,” opined Higher Education Minister Dr. C.N. Ashwathnarayana.
He participated in the valedictory program of the 51st Music Conference held at the Gayana Samaja in Bengaluru today. In his address, he said, “Culture and behavior are necessary to lead a peaceful life today. It is the intention of Govt. of India that education should have the essence of Indian culture and traditions, as just school and college education itself is not enough. That is why Prime Minister Narendra Modi has implemented the new National Education Policy keeping in mind the idea of overall evolution,” he added.
Srinarayana Jeeyar of the Sri Yadugiri Yatiraja Math, Conference President Krishnamurthy, music vidwans Suryaprakash, A.V. Anand, Chief of Gayana Samaja M.R.V. Prasad and Vice-President Achyuta Padaki were present.
Keywords: Higher Education Minister/ Dr. C.N. Ashwathanarayana/ Gayana Samaja/ Gangubai Hanagl University/ revival

website developers in mysore