ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್: ಜಾತಿ ಆಧಾರದಲ್ಲಿ ಮತ ಕೇಳುವ ಆಟ ಬಯಲಾಗಿದೆ- ಸಿಎಂ ಬೊಮ್ಮಾಯಿ ವಾಗ್ದಾಳಿ

Promotion

ತುಮಕೂರು,ಡಿಸೆಂಬರ್,7,2022(www.justkannada.in): ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್.  ಜಾತಿ ಆಧಾರದಲ್ಲಿ ಮತ ಕೇಳುವ ಕಾಂಗ್ರೆಸ್ ನ ಆಟ ಬಯಲಾಗಿದೆ ಎಂದು  ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ತುಮಕೂರು ಜಿಲ್ಲೆಯಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಸಮಾಜ ಕಲ್ಯಾಣ ಇಲಾಖೆಯ ತಲೆದಿಂಬು ವಿತರಣೆಯಲ್ಲಿ ಅಕ್ರಮವಾಗಿದೆ. ಸಿದ್ದರಾಮಯ್ಯ ಹೇಳುವ ಯಾವುದೂ ಸತ್ಯ ಆಗುವುದಿಲ್ಲ. ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಸಿಎಂ ಆಗಲ್ಲ ಅಂತಾ ಹೇಳಿದ್ದರು. ಆದರೆ ಇಬ್ಬರೂ ನಾಯಕರು ಸಿಎಂ ಆದರು ಎಂದು ಲೇವಡಿ ಮಾಡಿದರು.

ಮೂರು ಬಾರಿ ಅರಳದ ಕಮಲ ಈ ಬಾರಿ ಕುಣಿಗಲ್‌ ನಲ್ಲಿ ಗೆದ್ದು ಕಮಲ‌ ಅರಳಿಸಲಿದೆ. ಹೋದ ಎಲ್ಲ ಕಡೆಯೂ ಜನಸಂಕಲ್ಪಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕಾರ್ಯಗಳಿಂದ ಜನ ಸ್ಪಂದನೆ ನೀಡುತ್ತಿದ್ದಾರೆ. ತುಮಕೂರಿನಲ್ಲಿ ಬಿಜೆಪಿಯ ಗಾಳಿ ಬೀಸುತ್ತಿದೆ. ಕೆಲ ಕ್ಷೇತ್ರಗಳಲ್ಲಿ ನಾವು ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದೇವೆ. ಬರೆದಿಟ್ಟುಕೊಳ್ಳಿ ಈ ಬಾರಿ‌ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Key words: Gangotri- corruption -Congress -CM Bommai