ಗ್ಯಾಂಗ್ ರೇಪ್ ಪ್ರಕರಣ: ಆರೋಪಿಗಳನ್ನ ಮೈಸೂರಿಗೆ ಕರೆತಂದ ಪೊಲೀಸರು.  

Promotion

ಮೈಸೂರು,ಆಗಸ್ಟ್,28,2021(www.justkannada.in): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ  ತಮಿಳುನಾಡಿನಲ್ಲಿ ಬಂಧಿಸಲಾಗಿರುವ ಐವರು ಆರೋಪಿಗಳನ್ನ ಪೊಲೀಸರು ಮೈಸೂರಿಗೆ ಕರೆತಂದಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಗಿಳಿದಿದ್ದ ಮೈಸೂರು ಪೊಲೀಸರ ತಂಡ ತಮಿಳುನಾಡಿದ ಸತ್ಯಮಂಗಲದಲ್ಲಿ ಐವರು ಆರೋಪಿಗಳನ್ನ ಬಂಧಿಸಿದ್ದರು. ಇದೀಗ ಈ ಐವರು ಆರೋಪಿಗಳನ್ನ ಮೈಸೂರಿಗೆ ಕರೆ ತಂದು ಅಜ್ಞಾತ ಸ್ಥಳದಲ್ಲಿ ಪೊಲೀಸರು ಗೌಪ್ಯ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಚಾರಣೆ ಬಳಿಕ ನ್ಯಾಯಾಲಯದ ಮುಂದೆ ಆರೋಪಿಗಳನ್ನ ಹಾಜರುಪಡಿಸಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಆರೋಪಿಗಳ ಬಂಧನ ಕುರಿತು ಮಾಹಿತಿ ನೀಡಲು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮೈಸೂರಿನತ್ತ ಆಗಮಿಸುತ್ತಿದ್ದಾರೆ.

Key words:  gang rape- case-police -accused – Mysore.