ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಘಟನೆ ನಡೆದ ಬಗ್ಗೆ ವಿವರವಾಗಿ ಮಾಹಿತಿ ಬಿಚ್ಚಿಟ್ಟ ಸಂತ್ರಸ್ತೆ ಸ್ನೇಹಿತ.

Promotion

ಮೈಸೂರು,ಆಗಸ್ಟ್,27,2021(www.justkannada.in): ಮೈಸೂರಿನಲ್ಲಿ  ವಿದ್ಯಾರ್ಥಿನಿ ಮೇಲೆ ನಡೆದ  ಗ್ಯಾಂಗ್ ರೇಪ್  ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ವಿವರಿಸಿದ್ದಾರೆ.

ಯುವಕ ಮತ್ತು ಯುವತಿ ಜಾಗಿಂಗ್​ ಗೆ ಹೋದಾಗ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ತನ್ನ ಮೇಲೂ ಹಲ್ಲೆ ನಡೆದಿರುವುದಾಗಿ ಯುವಕ ಹೇಳಿಕೊಂಡಿದ್ದಾರೆ.

ಆಗಸ್ಟ್​ 24ರ ಸಂಜೆ 7.25 ರಿಂದ 7.30ರ ಸುಮಾರಿಗೆ ಜೆಎಸ್‌ಎಸ್ ಆಯುರ್ವೇದಿಕ್ ಕಾಲೇಜಿನ ಮುಂದೆ ವಾಟರ್ ಟ್ಯಾಂಕ್ ಬಳಿ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ಯಾವಾಗಲೂ ಜಾಗಿಂಗ್‌ ಗೆ ಹೋಗುವ ಸ್ಥಳ ಅದಾಗಿತ್ತು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿ ನನ್ನ ಸ್ನೇಹಿತೆ ಜೊತೆ ಕುಳಿತಿದ್ದೆ.

ಆ ವೇಳೆ  25 ರಿಂದ‌ 30 ವರ್ಷದ ಸುಮಾರು 6 ಮಂದಿ ಬಂದರು. ಏಕಾಏಕಿ ಬಂದು ದೊಣ್ಣೆಯಿಂದ  ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ನನ್ನನ್ನು ತಳ್ಳಿ ಜೊತೆಯಲ್ಲಿದ್ದ ನನ್ನ ಸ್ನೇಹಿತೆಯನ್ನ ಪೊದೆಗಳಿರುವ ಜಾಗಕ್ಕೆ ಎಳೆದುಕೊಂಡು ಹೋದರು. ಅಲ್ಲಿದ್ದ ಗುಂಪಿನವರಲ್ಲಿ ಒಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆ ವೇಳೆ ನನಗೆ ಪ್ರಜ್ಞೆ ತಪ್ಪಿ  15 ನಿಮಿಷದ ನಂತರ ಪ್ರಜ್ಞೆ ಬಂದಿತು.

ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಕಾಲ್ ಮಾಡಿಸಿದರು. 3 ಲಕ್ಷ ರೂಪಾಯಿ ಹಣ ಕೊಡುವಂತೆ ಒತ್ತಾಯ ಮಾಡಿದರು. ನಾನು ಗೆಳತಿ ಎಲ್ಲಿ ಎಂದು ಕೇಳಿದಾಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳಿಗೆ ತರಚಿದ ಗಾಯಗಳಾಗಿದ್ದವು. ಎಂದು ಪೊಲೀಸರಿಗೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ENGLISH SUMMARY….

Gang rape case in Mysuru: Victim’s friend reveals incident in detail
Mysuru, August 27, 2021 (www.justkannada.in): The friend of the gang-rape victim in Mysuru has provided complete details to the police about the incident.
However, the revelations are alarming. The incident took place while the victim had gone jogging. He has informed that the criminals attacked him also.
“On August 24 at around 7.25 and 7.30 pm, we both were walking on the mud road near the water tank, in front of the JSS Ayurvedic College. I usually go jogging there. We stopped the bike there and were sitting at the spot. Six people aged between 25 to 30 years of age arrived at the spot and attacked me all of a sudden using sticks. They pushed me and dragged my friend to the nearby bushes. One of them hit me on my forehead with a stone and I fell unconscious. I gained consciousness only after 15 minutes.”
“Four of them came near me and asked me to call my father and demand Rs. 3 lakh ransom. When I enquired them about her they dragged her and made her sit beside me. I found that she was grievously injured. She had bruises all over her body,” he explained to the police.
Keywords: Mysuru/ Gang rape case/ Victim’s friend revelation/ Police

Key words: Gang rape -case –Mysore-victim’s- friend- detail -about – incident.