ಕೆಯುಡಬ್ಲ್ಯೂಜೆಯಲ್ಲಿ ಇಂದು ಜಿ.ಎನ್.ರಂಗನಾಥ ರಾವ್ ಅವರ ‘ಆ ಪತ್ರಿಕೋದ್ಯಮ’ ಪುಸ್ತಕ ಬಿಡುಗಡೆ.

Promotion

ಬೆಂಗಳೂರು,ಆಗಸ್ಟ್,6,2022(www.justkannada.in): ರಂಗನಾಥ ರಾವ್ ಅವರು ಬರೆದಿರುವ  ಆ ಪತ್ರಿಕೋದ್ಯಮ ಪುಸ್ತಕವನ್ನು ಬಹುರೂಪಿ ಪ್ರಕಾಶನ ಹೊರ ತಂದಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದೆ.

ಬೆಳಿಗ್ಗೆ 11 ಗಂಟೆಗೆ ಖ್ಯಾತ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ಪುಸ್ತಕ ಬಿಡುಗಡೆ ಮಾಡುವರು. ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್.ಎನ್.ಆರತಿ, ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.

ಸುದ್ದಿಮನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಜಿ.ಎನ್.ರಂಗನಾಥ ರಾವ್ ಹೆಸರು ಎಲ್ಲರಿಗೂ ಚಿರಪರಿಚಿತವಾದದ್ದೆ. ಪ್ರಜಾವಾಣಿ ಪತ್ರಿಕೆಯಲ್ಲಿ ನಾನಾ ಹಂತದಲ್ಲಿ ಹಲವು ಹುದ್ದೆ ನಿಭಾಯಿಸಿದ್ದಲ್ಲದೆ, ಅದೇ ಪತ್ರಿಕೆಯಲ್ಲಿ ಆರು ವರ್ಷ ಸಂಪಾದಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಜಿ.ಎನ್.ರಂಗನಾಥರಾವ್ ಅವರದ್ದು.  ಕೆಯುಡಬ್ಲ್ಯೂಜೆ ಜತೆಗೆ ಸುಧೀರ್ಘ ಒಡನಾಟ ಇಟ್ಟಕೊಂಡಿದ್ದ ಅವರು ಬಹುಕಾಲ ಸಂಘದ ಸಕ್ರೀಯ ಸದಸ್ಯರು ಆಗಿದ್ದರು.

Key words: G. N. Ranganatha Rao- book- ‘Aa Patrikodyam-released -today -KUWJ