“ಗಡಿನಾಡ ಕನ್ನಡಿಗರ ಬಗ್ಗೆ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ” : ವಾಟಾಳ್ ನಾಗರಾಜ್ ಆಕ್ರೋಶ

Promotion

ಬೆಂಗಳೂರು,ಫೆಬ್ರವರಿ,10,2021(www.justkannada.in) : ಎಲ್ಲ ಸರ್ಕಾರಗಳೂ ಗಡಿನಾಡ ಕನ್ನಡಿಗರ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಗಡಿನಾಡು, ಹೊರನಾಡುಗಳಲ್ಲಿ ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದರು.

jk

ಬೆಂಗಳೂರಿನಿಂದ ಚಾಮರಾಜನಗರದವರೆಗೆ ವಾಹನಗಳ ಮೂಲಕ ಸಾಗಿ, ಸ್ವಚ್ಛ ಕನ್ನಡ ಪ್ರದೇಶವಾದ ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ಗಡಿನಾಡು, ಹೊರನಾಡುಗಳಲ್ಲಿ ಕನ್ನಡಿಗರ ಪರಿಸ್ಥಿತಿ ಶೋಚನೀಯವಾಗಿದೆ. ಬೆಳಗಾವಿಯಲ್ಲಿ ಶಿವಸೇನೆ, ಎಂಇಎಸ್ ಅವರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಚಾಮರಾಜನಗರದ ಗಡಿಭಾಗದ ತಾಳವಾಡಿ, ಆಂಧ್ರದ ಮಡಕಶಿರಾ, ಮಹಾರಾಷ್ಟ್ರದ ಜತ್ತ, ಕೇರಳದ ಕಾಸರಗೋಡು ತಾಂತ್ರಿಕವಾಗಿ ಬೇರೆ ರಾಜ್ಯಗಳಲ್ಲಿ ಇದ್ದರೂ ಭಾವನಾತ್ಮಕವಾಗಿ ಕರ್ನಾಟಕದಲ್ಲಿಯೇ ಬೆಸೆದು ಹೋಗಿವೆ ಎಂದು ಹೇಳಿದರು.

ಕನ್ನಡಿಗರ ಪ್ರಾಕಾರ ರಚನೆ ಮಾಡಿ, ಆಯವ್ಯಯದಲ್ಲಿ 1000 ಕೋಟಿ ರೂ.ಅನುದಾನ ಮೀಸಲಿಡಿFrontier,Kannadigara,About,All governments,Neglect,Vatal Nagaraj,Outrage

ಈ ಭಾಗದಲ್ಲಿ ಕನ್ನಡಿಗರ ಅಭಿವೃದ್ಧಿಗೆ ಕನ್ನಡಿಗರ ಪ್ರಾಕಾರ ರಚನೆ ಆಗಬೇಕು, ಆಯವ್ಯಯದಲ್ಲಿ 1000 ಕೋಟಿ ಅನುದಾನ ಮೀಸಲಿಡಬೇಕು.  ಗಡಿನಾಡು, ಹೊರನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಹೊರನಾಡು ಶಾಲೆಗಳ ಅಭಿವೃದ್ಧಿ, ಅಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

key words : Frontier-Kannadigara-About-All governments-Neglect-Vatal Nagaraj-Outrage