ಸೌಹಾರ್ದಯುತ ಕ್ರಿಕೆಟ್: ಮೈಸೂರು ಪತ್ರಕರ್ತರ ವಿರುದ್ಧ ಗೆದ್ದ ಪೊಲೀಸರು !

Promotion

ಮೈಸೂರು, ಡಿಸೆಂಬರ್ 06, 2020 (www.justkannada.in): ನಗರದಲ್ಲಿ ಪತ್ರಕರ್ತರ ಹಾಗೂ ಪೊಲೀಸರ ನಡುವೆ ಕ್ರಿಕೆಟ್ ಪಂದ್ಯಾವಳಿ ಇಂದು ನಡೆಯಿತು.

ಇಂದು ಬೆಳಗ್ಗೆ ಸೌಹಾರ್ದಯುತ ಫ್ರೆಂಡ್ಲಿ ಮ್ಯಾಚ್ ಆಯೋಜನೆ ಮಾಡಲಾಗಿತ್ತು. ಮೈಸೂರು ಜಿಲ್ಲಾ ನಗರ ಪತ್ರಕರ್ತರ ಹಾಗೂ ಮೈಸೂರು ನಗರ ಪೊಲೀಸರ ನಡುವಿನ ಪಂದ್ಯ ನಗರದ ಫೈರ್ ರೇಂಜ್ ಕ್ರೀಡಾಂಗಣದಲ್ಲಿ ನಡೆಯಿತು.

ಪಂದ್ಯಾವಳಿಗಳಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ರಿಂದ ಚಾಲನೆ ನೀಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಗರ ಪೊಲೀಸ್ ತಂಡ ಪತ್ರಕರ್ತರ ತಂಡದ ವಿರುದ್ಧ ಜಯ ಸಾಧಿಸಿತು.