ವರಮಹಾಲಕ್ಷ್ಮಿ‌ ಹಬ್ಬ ಹಿನ್ನಲೆ: ಮೈಸೂರಿನಲ್ಲಿ ಎರಡು ದಿನಗಳ ಕಾಲ ಹೂವಿನ ಮಾರುಕಟ್ಟೆ ಸ್ಥಳಾಂತರ…

Promotion

ಮೈಸೂರು,ಜು,28,2020(www.justkannada.in): ಶುಕ್ರವಾರ ವರಮಹಾಲಕ್ಷ್ಮಿ‌ ಹಬ್ಬ ಹಿನ್ನಲೆ ನಾಳೆಯಿಂದ ಎರಡು ದಿನಗಳ ಕಾಲ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿನ ಹೂವಿನ ಮಾರುಕಟ್ಟೆಯನ್ನ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.jk-logo-justkannada-logo

ದೇವರಾಜ ಮಾರುಕಟ್ಟೆಯಿಂದ ಜೆಕೆ ಗ್ರೌಂಡ್ ಗೆ ಹೂವಿನ ಮಾರುಕಟ್ಟೆ ಸ್ಥಳಾಂತರ ಮಾಡಿ ಮೈಸೂರು ಮಹಾನಗರ ಪಾಲಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಎರಡು ದಿನಗಳ ಕಾಲ ಜೆಕೆ ಗ್ರೌಂಡ್ ನಲ್ಲಿ ಹೂವು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚಿನ ಜನಸಂದಣಿ ಇರುವ ಕಾರಣಕ್ಕೆ  ಮೈಸೂರು ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ.friday-varamahalakshmi-festival-flower-market-relocation-two-days-mysore

ಈ ಹಿಂದೆ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪರ ಮಾಡುವಂತೆ ಪಾಲಿಕೆ ಅಧಿಕಾರಿಗಳು ಕರೆ ನೀಡಿದ್ದರು. ಆದರೆ ಹೂವಿನ ಮಾರಾಟಗಾರರು ಅಧಿಕಾರಿಗಳ ಕರೆಯನ್ನು ನಿರ್ಲಕ್ಷ್ಯಸಿದ್ದರು. ಹೀಗಾಗಿ ಮಾರುಕಟ್ಟೆ ಸ್ಥಳಾಂತರ ಮಾಡಲಾಗಿದ್ದು, ಇನ್ನುಳಿದ ಎಲ್ಲಾ ರೀತಿಯ ಅಂಗಡಿಗಳು ದೇವರಾಜ ಮಾರುಕಟ್ಟೆಯಲ್ಲಿ ಓಪನ್ ಆಗಿರಲಿವೆ. ಹಣ್ಣು-ತರಕಾರಿ, ಪೂಜಾ ಸಾಮಾನುಗಳ ಎಂದಿನಂತೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

Key words: Friday -Varamahalakshmi festival-Flower market -relocation – two days -Mysore.