ವಿಶ್ವ ಶ್ರವಣಶಕ್ತಿ’ ದಿನ ಅಂಗವಾಗಿ ಮೈಸೂರು ಐಶ್(AIISH) ವತಿಯಿಂದ ಎರಡು ದಿನಗಳ ಕಾಲ ಉಚಿತ ಶ್ರವಣಶಕ್ತಿ ತಪಾಸಣೆ…

Promotion

ಮೈಸೂರು,ಫೆ,21,2020(www.justkannada.in)): ಸಂವಹನ ನ್ಯೂನತೆ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಮೈಸೂರು ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು ಸಮಾಜದ ಹಿರಿಯರೆಡೆಗಿನ ಕಾಳಜಿಯಿಂದಾಗಿ ಪ್ರತಿ ವರ್ಷ ಮಾರ್ಚ್ 3ರಂದು ‘ವಿಶ್ವಆರೋಗ್ಯ ಸಂಸ್ಥೆ’ಯು ಆಚರಿಸುವ’ವಿಶ್ವ ಶ್ರವಣಶಕ್ತಿ’ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಆಶಿಸುತ್ತಿದೆ.

ವಿಶ್ವ ಶ್ರವಣಶಕ್ತಿ’ ದಿನ ಅಂಗವಾಗಿ ಅಂಗವಾಗಿ ಫೆಬ್ರವರಿ 22 ಮತ್ತು 23 ರಂದು’ ಉಚಿತ ಶ್ರವಣಶಕ್ತಿ ತಪಾಸಣೆ’ಯನ್ನು  ಮೈಸೂರಿನ ಐಶ್ ಆಯೋಜಿಸಿದ್ದು, ಬೆಳಿಗ್ಗೆ 6.00ರಿಂದ11.00ರವರೆಗೆತಪಾಸಣೆ ನಡೆಸಲಾಗುತ್ತದೆ.

ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸ್ಥೆಯ ನಿರ್ದೇಶಕರು ಹಾಗೂ ಸಿಬ್ಬಂದಿಯು ಸಾರ್ವಜನಿಕರನ್ನು ಕೋರಿದ್ದಾರೆ. ಮೊದಲ ಬರುವ 250 ಮಂದಿಗೆ ಆದ್ಯತೆ ನೀಡಲಾಗುವುದು. 50 ವರ್ಷ ಮೇಲ್ಪಟ್ಟ ಎಲ್ಲರೂ ಈ ದಿನಗಳಲ್ಲಿ ಸಂಸ್ಥೆಗೆ ಬಂದು ಉಚಿತವಾಗಿತಮ್ಮ ಶ್ರವಣಶಕ್ತಿಯನ್ನು ಪರೀಕ್ಷಿಸಿಕೊಳ್ಳಬಹುದು ಮತ್ತು ಅವರಿಗೆ ಉಪಹಾರದ ವ್ಯವಸ್ಥೆಯಿರುತ್ತದೆ. ನೋಂದಣಿಗಾಗಿ ಶ್ರೀ.ಉಲ್ಲಾಸ್ಎನ್. ಭಾರ್ಗವ್(+918050951586)/ ಶ್ರೀ ಹರೀಶ್ಕುಮಾರ್(+919738421106) ಅವರನ್ನು ಸಂಪರ್ಕಿಸಬಹುದು.

Key words: Free hearing –testing- two days -Mysore –AIISH- World Audio Day.