ಉಚಿತ ಕೋವಿಡ್ ಲಸಿಕೆ ವಿಚಾರ: ಸಮರ್ಥಿಸಿಕೊಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ…

Promotion

ಚಿಕ್ಕಮಗಳೂರು,ಅಕ್ಟೋಬರ್,23,2020(www.justkannada.in):  ಉಚಿತ ಅಕ್ಕಿ‌ ಕೊಡುತ್ತೇವೆ, ಲ್ಯಾಪ್ ಟಾಪ್ ಕೊಡುತ್ತೇವೆ ಎನ್ನುತ್ತಾರೆ. ಹಾಗೆಯೇ ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಕೊಡುತ್ತೇವೆ ಅಂದ್ರೆ ಅದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಶ್ನಿಸಿದ್ದಾರೆ.jk-logo-justkannada-logo

ಬಿಹಾರ ಚುನಾವಣೆ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ವಿಚಾರ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ,  ಉಚಿತವಾಗಿ ಅಕ್ಕಿ ಕೊಡ್ತಾರೆ. ಉಚಿತವಾಗಿ ಲ್ಯಾಪ್ ಟ್ಯಾಪ್ ಕೊಡ್ತೀನಿ ಅಂತಾರೆ. ಹಾಗೆಯೇ ಉಚಿತ ಕೋವಿಡ್ ಲಸಿಕೆ ಕೊಡ್ತೀವಿ ಅಂದ್ರೆ ತಪ್ಪೇನು ಎಂದು ಸಮರ್ಥಿಸಿಕೊಂಡರು.Free- Covid Vaccine –bihar-  Defended -BJP national general secretary- CT Ravi.

ಜೀವ ಉಳಿಸಲು ನೆರವಾಗುವ ಕೆಲಸಕ್ಕೆ ಉಚಿತವಾಗಿ ಕೊಡುತ್ತೇವೆ. ಆಯಷ್ಮಾನ್ ಭಾರತ್ ಜಗತ್ತಿನ ದೊಡ್ಡ ಇನ್ಶುರೆನ್ಸ್ ಯೋಜನೆ. ನಾವು ಹೇಳಿದ್ದೇವು ಮಾಡುತ್ತಿದ್ದೇವೆ ತಪ್ಪೇನಿದೆ. ಬಿಹಾರದಲ್ಲಿ ಉಚಿತ ಲಸಿಕೆ ಕೋಡ್ತಿವಿ ಅಂತ ಹೇಳಿದ್ದೇವೆ. ಲಸಿಕೆ ಸಿಕ್ಕಾಗ ಉಚಿತವಾಗಿ ಲಸಿಕೆ  ಕೊಡಲಾಗುತ್ತದೆ ಎಂದರು.

Key words: Free- Covid Vaccine –bihar-  Defended -BJP national general secretary- CT Ravi.