ನಟಿ ಪ್ರಣಿತಾ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ ! ದೂರು ದಾಖಲು

Promotion

ಬೆಂಗಳೂರು, ಅಕ್ಟೋಬರ್ 13, 2020 (www.justkannada.in): ನಟಿ ಪ್ರಣಿತಾ ಸುಭಾಷ್ ಹೈಬ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಣಿತಾ ಹೆಸರಿನಲ್ಲಿ ಎಸ್‌ಬಿ ಗ್ರೂಪ್ ಆ್ಯಂಡ್ ಡೆವಲಪರ್ಸ್ ಕಂಪನಿ ವ್ಯವಸ್ಥಾಪಕರಿಂದ 13.50 ಲಕ್ಷ ರೂ . ಪಡೆದು ವಂಚಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ನಮ್ಮ ಕಂಪನಿ ಬ್ರಾಂಡ್ ಅಂಬಾಸಿಡರ್ ಅಗತ್ಯವಿತ್ತು . ಸ್ನೇಹಿತ ಪ್ರಶಾಂತ್ ಮೂಲಕ ಆರೋಪಿ ಜುನಾಯತ್ ಪರಿಚಯವಾಗಿದ್ದ . ಪ್ರಣೀತಾ ಅವರನ್ನು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿಸುತ್ತೇನೆ ಎಂದು ಹೇಳಿ ಹಣ ಪಡೆದಿದ್ದ ಎಂದು ಅಮರನಾಥ್ ರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.