ಶೆಡ್ ಮೇಲೆ ಗೋಡೆ ಕುಸಿದು ನಾಲ್ವರು ಸಾವು.

Promotion

ದೇವನಹಳ್ಳಿ,ಜುಲೈ,21,2022(www.justkannada.in): ಶೆಡ್ ಮೇಲೆ ಅಪಾರ್ಟ್ ಮೆಂಟ್ ನ ಗೋಡೆ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಹಳ್ಳಿ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ  ನಡೆದಿದೆ. ಮನೋಜ್ ಕುಮಾರ್ ಸದಯ್ (35 ), ರಾಮ್ ಕುಮಾರ್ ಸದಯ್ (25), ನಿತೀಶ್ ಕುಮಾರ್ ಸದಯ್ (22) ಸೇರಿ ನಾಲ್ವರು ಮೃತಪಟ್ಟವರು. ಘಟನೆಯಲ್ಲಿ ಸುನಿಲ್ ಮಂಡಲ್, ಶಂಭು ಮಂಡಲ, ದಿಲೀಪ್, ದುರ್ಗೇಶ್​ಗೆ ಗಾಯವಾಗಿದೆ. ಗಾಯಾಳುಗಳನ್ನಅಸ್ವತ್ರೆಗೆ ರವಾನೆ ಮಾಡಲಾಗಿದೆ.  ಮೃತ ಕಾರ್ಮಿಕರು ಬಿಹಾರ  ಮೂಲದ ನಿವಾಸಿಗಳಾಗಿದ್ದಾರೆ.

ಶೆಡ್​ ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು. ಈ ವೇಳೆ ಅಪಾರ್ಟ್​ಮೆಂಟ್ ಗೋಡೆ ಕುಸಿದಿದೆ. ಉಳಿದ ನಾಲ್ಕು ಕಾರ್ಮಿಕರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳಕ್ಕೆ ಎಎಸ್​ಪಿ ಪುರುಷೋತ್ತಮ್ ಹಾಗೂ ಹೊಸಕೋಟೆ ಡಿವೈಎಸ್​ಪಿ ಉಮಾಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಸಂಸ್ಥೆ​​​​ ಕಾಂಪೌಂಡ್​​ ಗೋಡೆ ನಿರ್ಮಾಣ ಮಾಡಿತ್ತು. ರಾತ್ರಿ ಸುರಿದ ಮಳೆಗೆ ಪಕ್ಕದ ಗೋಡೆ ಶೆಡ್ ಮೇಲೆ ಕುಸಿದು ದುರಂತ ಸಂಭವಿಸಿದೆ.

Key words: Four –people- died – wall- collapsed – shed.