ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ನಾಲ್ವರು ದುರ್ಮರಣ: ನೀರಿನಲ್ಲಿ ಮುಳುಗಿದ ವ್ಯಕ್ತಿಯ ಶವ ಹುಡುಕಲು ಹೋದಾಗ ದುರಂತ.

Promotion

ಬಾಗಲಕೋಟೆ,ಅಕ್ಟೋಬರ್,7,2021(www.justkannada.in):  ಮುಳುಗಿದ್ಧ ವ್ಯಕ್ತಿಯ ಮೃತದೇಹ ಹುಡುಕುವ ವೇಳೆ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ. ಬಾಗಲಕೋಟೆ ತಾಲೂಕಿನ ಹುನಗುಂದ ಬಳಿ ಧನ್ನೂರು ಗ್ರಾಮದಲ್ಲಿ ಒಬ್ಬನ ಶವ ಪತ್ತೆಗಾಗಿ ತೆರಳಿದ ಮೂವರು ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಶಿವಪ್ಪ ಅಮಲೂರು, ಶಿವಪ್ಪ ಅಮಲೂರು ಪುತ್ರ ಯಮನಪ್ಪ ಅಮಲೂರು(30), ಶರಣಗೌಡ ಬಿರಾದರ್‌, ಬೋಟ್ ಅಪರೇಟರ್‌ ಪರಶು ಮೃತಪಟ್ಟವರು.

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಹರನಾಳಕ್ಕೆ ಸೇರಿದ್ದ ಮಾನಸಿಕ ಅಸ್ವಸ್ಥನಾಗಿದ್ದ ಶಿವಪ್ಪ ಅಮಲೂರು ನದಿಯಲ್ಲಿ ಮುಳುಗಿದ್ದ.  ಈ ವೇಳೆ  ಶಿವಪ್ಪನ ಮೃತದೇಹ ಹುಡುಕಲು  ಮೂವರು ಬೋಟ್ ನಲ್ಲಿ  ತೆರಳಿದ್ದಾರೆ. ಈ ವೇಳೆ ವಿದ್ಯುತ್ ತಗುಲು ಮೂವರು ಮೃತಪಟ್ಟಿದ್ದಾರೆ.

ಇನ್ನು ಅದೃಷ್ಟವಷಾತ್‌ ಬೋಟ್‌ನಲ್ಲಿದ್ದ ಇತರೆ 8 ಜನರು ಪಾರಾಗಿದ್ದಾರೆ. ಸಧ್ಯ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಕಾರ್ಯಚರಣೆಯಲ್ಲಿ ತೊಡಗಿದೆ.  ಈ ಕುರಿತು ಹುನಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Key words: Four -dead -Narayanapur dam- backwater