ಮೈಸೂರಿನಲ್ಲಿ ಇಂದು ನಾಲ್ಕು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ…

Promotion

ಮೈಸೂರು,ಜೂ,16,2020(www.justkannada.in): ಮಹಾಮಾರಿ ಕೊರೋನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೊರೋನಾ ಹರಡದಂತೆ ತಡೆಗಟ್ಟಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ನಡುವೆ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಲ್ಕು ಕೊರೋನಾ ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಇದೆ.

ಮೈಸೂರಿನಲ್ಲಿ ದಿನೇದಿನೇ ಮಹಾಮಾರಿ ಹೆಚ್ಚುತ್ತಿದ್ದು ಇಂದು ಸಹ ನಾಲ್ಕು ಕೊರೋನಾ ಪ್ರಕರಣ ಪತ್ತೆಯಾಗುವ ಸಾಧ್ಯತೆ ಇದೆ.  ಹೊರ ರಾಜ್ಯದಿಂದ ಬಂದವರಿಂದ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಕೋವಿಡ್-19 ಆಸ್ಪತ್ರೆಯಲ್ಲಿ 20 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.four-corona-positive-case-mysore-today

ಇನ್ನು ನಾಲ್ವರ ಪೈಕಿ ಮೂರು ಪ್ರಕರಣಗಳು ಮಹಾರಾಷ್ಟ್ರದ ಸೋಲ್ಲಾಪುರದಿಂದ ಬಂದವರು ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಮುಂಬೈನಿಂದ ಬಂದವರಿಂದಲೇ ಹೆಚ್ಚಿನ ಕೊರೋನಾ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಮುಂಬೈಯಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ.

Key words: Four- Corona positive- case – Mysore -today.