ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹ: ಕಾಂಗ್ರೆಸ್ ಅಹೋರಾತ್ರಿ ಧರಣಿಗೆ ನಿರ್ಧಾರ.

ಬೆಂಗಳೂರು,ಫೆಬ್ರವರಿ,17,2022(www.justkannada.in): ಸಚಿವ ಕೆಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿಗೆ ಮುಂದಾಗಿದೆ.

ಈ ಕುರಿತು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ,  ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಕೆ.ಎಸ್ ಈಶ್ವರಪ್ಪರನ್ನ ವಜಾ ಮಾಡಿಲ್ಲ. ಇದರ ಅರ್ಧ RSS ಹಿಡನ್ ಅಜೆಂಡಾವನ್ನು, ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ. ಸಂವಿಧಾನದ ಮೇಲೆ ಅವರಿಗೆ ಗೌರವ ಇಲ್ಲ. ಈಶ್ವರಪ್ಪ ಮಾಡಿರುವುದು ಅಕ್ಷಮ್ಯ. ನಾವು ಅಹೋರಾತ್ರಿ ಧರಣಿ ತೀರ್ಮಾನ ಮಾಡಿದ್ದೇವೆ, ಅವರು ಸದನ ಮೊಟಕು ಮಾಡಿದರೂ, ಹಗಲು ರಾತ್ರಿ ಧರಣಿ ಮಾಡುತ್ತೇವೆ. ತಾರ್ಕಿಕ ಅಂತ್ಯದವರೆಗೂ ಧರಣಿ ಮುಂದುವರೆಸುತ್ತೇವೆ ಎಂದು ಹೇಳಿದರು.oxygen-death-24-patient-congress-leaders-visit-chamarajanagar-today

ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕೆ.ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನ ಸಂಪುಟದಿಂದ ವಜಾಗೊಳಿಸದಿದ್ದರೇ ಅವರು ರಾಜೀನಾಮೆ ನೀಡದಿದ್ದರೇ ಸದನದಲ್ಲಿ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ ಎಂದರು.

Key words: FormerCM- Siddaramiah-DK Shivakumar-KS eshwarappa