ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಚಂದನ್ ಮಿತ್ರ ಇನ್ನಿಲ್ಲ.

Promotion

ನವದೆಹಲಿ, ಆಗಸ್ಟ್ 2, 2021 (www.justkannada.in): ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಚಂದನ್ ಮಿತ್ರ ಬುಧವಾರ ರಾತ್ರಿ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಂದನ್ ಮಿತ್ರ ಪುತ್ರ ಕುಶನ್ ಮಿತ್ರ ತಮ್ಮ ಟ್ವೀಟ್‌ ನಲ್ಲಿ ‘ನನ್ನ ತಂದೆ ನಿನ್ನೆ ತಡರಾತ್ರಿ ಕೊನೆಯುಸಿರೆಳೆದರು ಎಂದು ತಿಳಿಸಿದ್ದಾರೆ.’ ಚಂದನ್ ಮಿತ್ರ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂಧ ಬಳಲುತ್ತಿದ್ದರು. ಅವರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಚಂದನ್ ಮಿತ್ರ ೨೦೦೩ ರಿಂದ ೨೦೦೯ರವರೆಗೆ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಿತರಾಗಿದ್ದರು. ಜೂನ್ ೨೦೧೦ರಲ್ಲಿ ಬಿಜೆಪಿ ಇವರನ್ನು ಮಧ್ಯ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಮಾಡಿತ್ತು. ಅವರ ಅವಧಿ ೨೦೧೬ರಲ್ಲಿ ಕೊನೆಗೊಂಡಿತು. ೨೦೧೮ರಲ್ಲಿ ಅವರು ತ್ರಿಣಮೂಲ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಚಂದನ್ ಮಿತ್ರ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ಹತ್ತಿರವಾಗಿದ್ದರು. ಚಂದನ್ ಮಿತ್ರ ‘ದಿ ಪಯೊನೀರ್’ ಆಂಗ್ಲ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರು ಆಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಚಂದನ್ ಮಿತ್ರ ಅವರ ಅಗಲಿಕೆಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Key words: Former -Rajya Sabha -member – senior journalist- Chandan Mitra –pass away